ಮಾದಕಪದಾರ್ಥ ವಿರುದ್ಧ ಹೋರಾಟ ಮುಖ್ಯಮಂತ್ರಿಯ ಕಪಟತನ-ವಿ.ಡಿ. ಸತೀಶನ್
ಕಾಸರಗೋಡು: ಮಾದಕ ಪದಾರ್ಥ ವಿರುದ್ಧದ ಹೋರಾಟ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಕಪಟತನವನ್ನು ತೋರಿಸುತ್ತಿದೆಯೆಂದು ವಿಪಕ್ಷ ಮುಖಂಡ ವಿ.ಡಿ. ಸತೀಶನ್ ಆರೋಪಿಸಿದರು. ತೀರದೇಶ ಸಂದೇಶ ಯಾತ್ರೆಯ ಸ್ವಾಗತ ಸಮಿತಿ ರೂಪೀಕರಣ ಸಭೆಯಲ್ಲಿ ಭಾಗವಹಿಸಲು ಕಾಸರಗೋಡಿಗೆ ತಲುಪಿದ ಅವರು ಮಾಧ್ಯಮ ಕಾರ್ಯಕರ್ತರೊಂದಿಗೆ ಮಾತ ನಾಡುತ್ತಿದ್ದರು. ಮಾದಕಪದಾರ್ಥ ವಿರುದ್ಧ ಹೋರಾಡುವುದಾಗಿ ಘೋಷಿಸುವ ಮುಖ್ಯಮಂತ್ರಿ ಸಚಿವ ಸಂಪುಟ ಸಭೆಯಲ್ಲಿ ಒಂದನೇ ತಾರೀಖಿನಂದು ಮದ್ಯ ಮಾರಾಟ ಕ್ಕಿರುವ ತೀರ್ಮಾನ ಕೈಗೊಂಡಿರು ವುದಾಗಿ ಅವರು ಆರೋಪಿಸಿದರು. ಇದು ಕಪಟತನವಾಗಿದೆ. ಎಸ್ ಎಫ್‌ಐ ರಾಜ್ಯದಲ್ಲಿ ಮಾದಕಪದಾರ್ಥ ವಿಸ್ತರಿಸುವ ಕೊಂಡಿಗಳಾಗಿ ಬದಲಾಗಿದೆ ಎಂದು ಅವರು ಆರೋಪಿಸಿದರು. ಸಿಪಿಎಂ ಎಸ್‌ಎಫ್‌ಐ ಕಾರ್ಯಕರ್ತರನ್ನು ಕ್ರಿಮಿನಲ್‌ಗಳಾಗಿ ಬದಲಿಸುತ್ತಿರುವುದಾಗಿ ಅವರು ದೂರಿದ್ದು, ಇದರಿಂದ ಹಿಂದೆ ಸರಿಯಬೇಕೆಂದು ಅವರು ಆಗ್ರಹಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್, ಮುಖಂಡರಾದ ಎ. ಗೋವಿಂದನ್ ನಾಯರ್, ಕೆ. ನೀಲಕಂಠನ್, ಕೆ.ಇ.ಎ ಬಕ್ಕರ್ ಮೊದಲಾದವರು ವಿ.ಡಿ. ಸತೀಶನ್ ಜೊತೆಗಿದ್ದರು.