ಮಾದಕವಸ್ತು ಬಳಕೆ: ಮೂವರ ಸೆರೆ
ಉಪ್ಪಳ: ಮಾದಕವಸ್ತು ಸೇದು ತ್ತಿದ್ದ ಮೂರು ಮಂದಿಯನ್ನು ಮಂ ಜೇಶ್ವರ ಪೊಲೀಸರು ಸೆರೆ ಹಿಡಿದಿ ದ್ದಾರೆ. ನಿನ್ನೆ ಸಂಜೆ ಪಾವೂರು ಗೇರುಕಟ್ಟೆಯಲ್ಲಿ ಎಂಡಿಎಂಎ ಸೇ ದುತ್ತಿದ್ದ ಕೆದುಂಬಾಡಿಯ ಅಬೂಬ ಕ್ಕರ್ ಸಿದ್ದಿಕ್ (22), ಕಡಂಬಾರ್ ನಿವಾಸಿ ಜಂಶೀದ್ (29) ಎಂಬಿ ವರನ್ನು ಸೆರೆ ಹಿಡಿಯಲಾಗಿದೆ. ಬಡಾಜೆ ಚೌಕಿಯಲ್ಲಿ ಗಾಂಜಾ ಬೀಡಿಸೇದುತ್ತಿದ್ದ ಮುಟ್ಟತ್ತೋಡಿ ಕಲ್ಲಕಟ್ಟದ ಮೊಹಮ್ಮದ್ ಅಶ್ರಫ್ (36) ಎಂಬಾತನನ್ನು ಬಂಧಿಸಲಾ ಗಿದೆ. ನಿನ್ನೆ ಸಂಜೆ ಮಂಜೇಶ್ವರ ಎಸ್.ಐ. ನಿಖಿಲ್ ನೇತೃತ್ವದ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಈ ಮೂವರು ವಿವಿಧೆಡೆ ಮಾದಕವಸ್ತು ಸೇದುತ್ತಿರುವುದು ಕಂಡು ಬಂದಿದೆ.