ಮಾದಕವಸ್ತುಗಳ ವಿರುದ್ಧ ಕ್ರಮ: ಅಧ್ಯಾಪಕರಿಗೆ ತರಬೇತಿ
ಕಾಸರಗೋಡು: ಶಾಲಾ ಅಧ್ಯಾಪಕರಿಗಿರುವ ಬೇಸಿಗೆಕಾಲದ ತರಬೇತಿಯಲ್ಲಿ ಈವರ್ಷದಿಂದ ಮಾದಕ ವಿರುದ್ಧ ಪಾಠವನ್ನು ಒಳಪಡಿಸಲಾಗಿದೆ. ಐದು ದಿನಗಳ ಕಾಲ ನಡೆಯುವ ತರಬೇತಿಯಲ್ಲಿ ಒಂದು ದಿನ ಮಕ್ಕಳನ್ನು ಮಾದಕ ವಸ್ತುಗಳಿಂದ ಹೇಗೆ ಪಾರು ಮಾಡ ಬಹುದು ಎಂಬುವುದರ ಕುರಿತು ಕಲಿಸಲಾಗುವುದು. ಮಕ್ಕಳು ಹಾಗೂ ಯುವಕರು ಮಾದಕವಸ್ತುಗಳತ್ತ ಆಕರ್ಷಿತರಾಗುವುದನ್ನು ಹಾಗೂ ಆಕ್ರಮಣ ಸ್ವಭಾವವನ್ನು ‘ಎದುರಿಸಲು ಬಾಲ್ಯ ಹಾಗೂ ಯೌವ್ವನದೊಂದಿಗೆ’ ಎಂಬ ಪ್ರಚಾರವನ್ನು ಶಾಲೆಗಳಲ್ಲಿ ನಡೆಸಲಾಗುವುದು. ಅಬಕಾರಿ ಅಧಿಕಾರಿಗಳು ಹಾಗೂ ಮಾನಸಿಕ ಆರೋಗ್ಯ ತಜ್ಞರು ತರಬೇತಿಯಲ್ಲಿ ಪಾಲ್ಗೊಳ್ಳುವರು. ತಿಳುವಳಿಕಾ ಕಾರ್ಯಕ್ರಮಗಳಲ್ಲಿ ಪಿಟಿಎ ಹಾಗೂ ಸಾರ್ವ ಜನಿಕರ ಸಹಭಾಗಿತ್ವವನ್ನು ಖಚಿತಪಡಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಮಾಸಿಕ ಸ್ಥಿತಿ ಉತ್ತಮಪಡಿಸಲು ಹಾಗೂ ಶಾಲಾ ವಾತಾವರಣವನ್ನು ಸೌಹಾರ್ದಪ್ರದಗೊಳಿ ಸಲು ದಿನಂಪ್ರತಿ ಒಂದು ಪಿರಿಯಾಡ್ ಮೀಸಲಿಡುವ ಬಗ್ಗೆ ಆಲೋಚನೆಯಿದೆ. ಈ ಬಾರಿ ಸೈಬರ್ ಸುರಕ್ಷತೆ ಕುರಿತಾಗಿಯೂ ಅಧ್ಯಾಪಕರಿಗೆ ತರಬೇತಿ ನೀಡಲಾಗುವುದು.