ಮಾನ್ಯ-ಚರ್ಲಡ್ಕ ರಸ್ತೆ ಸ್ಥಿತಿ ಶೋಚನೀಯ: ವಾಹನ ಸಂಚಾರಕ್ಕೆ ಸಮಸ್ಯೆ ಕಾಂಗ್ರೆಸ್‌ನಿಂದ ಹೋರಾಟ ಮುನ್ನೆಚ್ಚರಿಕೆ

ಮಾನ್ಯ: ಬದಿಯಡ್ಕ ಪಂಚಾ ಯತ್ ವ್ಯಾಪ್ತಿಯ ಮಾನ್ಯ ವಿಜಯ ನಗರದಿಂದ ಚರ್ಲಡ್ಕಕ್ಕೆ ಸಂಪರ್ಕಿ ಸುವ ರಸ್ತೆಯ ಸ್ಥಿತಿ ಶೋಚನೀ  ಯವಾಗಿದ್ದು, ಇದರಿಂದ ವಾಹನ ಸಂ ಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.

ಈ ರಸ್ತೆಯ ಅಭಿವೃದ್ಧಿಗಾಗಿ ಸರಕಾರದಿಂದ ೨ ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಇದರಂತೆ ಜೂನ್ ತಿಂಗಳಲ್ಲಿ ಕಾಮ ಗಾರಿ ಆರಂಭಿಸಲಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆಯೆಂದು ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿ ಆರೋಪಿಸಿದೆ.

ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯ ಸ್ಥಿತಿ ಶೋಚನೀಯಾವಸ್ಥೆಯಲ್ಲಿರುವುದು ನಾಗರಿಕರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ರಸ್ತೆಯ ಕಾಮಗಾರಿ ಶೀಘ್ರ ಆರಂಭಿಸದಿದ್ದಲ್ಲಿ ಪಿಡಬ್ಲ್ಯುಡಿ ಕಚೇರಿ ಮುಂದೆ ಸತ್ಯಾಗ್ರಹ ನಡೆಸುವುದಾಗಿ ಕಾಂಗ್ರೆಸ್ ಬದಿಯಡ್ಕ ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ತಿಳಿಸಿದ್ದಾರೆ.

RELATED NEWS

You cannot copy contents of this page