ಮುಖ್ಯಮಂತ್ರಿಗೆ ಕರಿಪತಾಕೆ ಪ್ರದರ್ಶನ: ಎರ್ನಾಕುಳಂನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಸೆರೆ; ಮುಂಜಾನೆವರೆಗೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ
ಎರ್ನಾಕುಳಂ: ಎರ್ನಾಕುಳಂ ನಲ್ಲಿ ನವಕೇರಳ ಸಭೆಗೆ ತಲುಪಿದ ಮುಖ್ಯ ಮಂತ್ರಿ ಪಿಣರಾಯಿ ವಿಜಯ ನ್ರಿಗೆ ಕರಿ ಪತಾಕೆ ತೋರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸೆರೆಹಿಡಿದ ಯೂತ್ ಕಾಂಗ್ರೆಸ್ ಕಾರ್ಯಕರ್ತ ರನ್ನು ಇಂದು ಮುಂಜಾನೆ ೨ ಗಂಟೆ ವೇಳೆ ಜಾಮೀನಿ ನಲ್ಲಿ ಬಿಡುಗಡೆಗೊಳಿ ಸಲಾಯಿತು.
ಕಾರ್ಯಕರ್ತರನ್ನು ಸೆರೆಹಿಡಿದುದನ್ನು ಪ್ರತಿಭಟಿಸಿ ಪಾಲಾರಿ ವಟ್ಟಂ ಪೊಲೀಸ್ ಠಾಣೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿದ್ದ ಚಳವಳಿಯನ್ನು ಬಳಿಕ ಕೊನೆಗೊಳಿಸ ಲಾಯಿತು.
ಸಂಸದ ಹೈಬಿ ಈಡನ್, ಶಾಸಕರಾದ ಉಮಾ ಥೋಮಸ್, ಟಿ.ಜೆ. ವಿನೋದ್, ಅನ್ವರ್ ಸಾದತ್, ಡಿಸಿಸಿ ಅಧ್ಯಕ್ಷ ಮೊಹಮ್ಮದ್ ಶಿಯಾಸ್, ದೀಪ್ತಿ ಮೇರಿ ವರ್ಗೀಸ್, ಅಬ್ದುಲ್ ಮುತ್ತಲೀಬ್, ಮಿನಿಮೋಳ್ ಮೊದಲಾದವರ ನೇತೃತ್ವದಲ್ಲಿ ಭಾರೀ ಸಂಖ್ಯೆಯ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಚಳವಳಿ ನಡೆಸಿದ್ದಾರೆ. ಇದರಿಂದ ಎರಡು ಗಂಟೆ ಕಾಲ ವಾಹನ ಸಂಚಾರ ಮೊಟಕುಗೊಂಡಿತು. ಜನಪ್ರತಿನಿಧಿಗಳ ಸಹಿತ ಚಳವಳಿ ನಿರತರನ್ನು ಹೊಡೆದೋಡಿಸುವುದಾಗಿ ಪೊಲೀಸರು ತಾಕೀತು ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ತೀವ್ರಗೊಂಡು ಸಂಘರ್ಷಾವಸ್ಥೆಗೆ ತಲುಪಿತ್ತು. ಇದರಿಂದ ಹೆಚ್ಚಿನ ಸಂಖ್ಯೆಯ ಪೊಲೀಸರು ಸ್ಥಳಕ್ಕೆ ತಲುಪಿದ್ದರು. ಕರಿಪತಾಕೆ ಪ್ರದರ್ಶಿಸಿದ ಏಳು ಮಂದಿ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಡುಗಡೆ ಮಾಡಲು ಪೊಲೀಸರು ಸಿದ್ಧರಾದರೂ ಸಿಪಿಎಂ ನೇತಾರರು ಠಾಣೆಗೆ ತಲುಪಿ ಜಾಮೀನು ಸಹಿತ ಕಾಯ್ದೆಗಳನ್ನು ಸೇರಿಸಿ ಹೊಸ ಕೇಸು ದಾಖಲಿಸಿರುವುದೇ ಸಂಘರ್ಷ ತೀವ್ರಗೊಳ್ಳಲು ಕಾರಣವಾಗಿದೆಯೆಂದು ಹೇಳಲಾಗುತ್ತಿದೆ.