ಮೊಗ್ರಾಲ್ ಸಮುದ್ರ ಕಿನಾರೆಯಲ್ಲಿ ತ್ಯಾಜ್ಯರಾಶಿ: ಸ್ಥಳೀಯರಿಗೆ ತೀವ್ರ ಸಮಸ್ಯೆ

ಕಾಸರಗೋಡು: ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡುತ್ತಿರುವಾಗಲೂ ವಿವಿಧೆಡೆ ಪ್ಲಾಸ್ಟಿಕ್ ಸಹಿತ ವಿವಿಧ ರೀತಿಯ ತ್ಯಾಜ್ಯಗಳನ್ನು ಉಪೇಕ್ಷಿಸುತ್ತಿರುವುದು ಕಂಡುಬರುತ್ತಿದೆ.

ಮೊಗ್ರಾಲ್ ಸಮುದ್ರ ತೀರದಲ್ಲಿ ವಿವಿಧ ರೀತಿಯ ತ್ಯಾಜ್ಯಗಳು ತುಂಬಿಕೊಂಡಿದೆ. ಮನೆಗಳ ಹಾಗೂ ವಿವಿಧ ಕಾರ್ಯಕ್ರಮಗಳ ಆಹಾರ ಅವಶಿಷ್ಟಗಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಮುದ್ರ ಕಿನಾರೆಯಲ್ಲಿ ಎಸೆಯುತ್ತಿರುವುದು ವ್ಯಾಪಕಗೊಂಡಿದೆ. ಕೆಲವರು ತ್ಯಾಜ್ಯ ರಾಶಿ ಹಾಕಿ ಕಿಚ್ಚಿಡುತ್ತಿರುವುದು ಕೂಡಾ ಕಂಡುಬರುತ್ತಿದೆಯೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆಹಚ್ಚಿ ಅವರಿಂದ ದಂಡ ವಸೂಲು ಮಾಡಲು ಎನ್‌ಫೋರ್ಸ್‌ಮೆಂಟ್ ಮುಂದಾದಾಗ ತ್ಯಾಜ್ಯ ರಾಶಿಯನ್ನು ಸಮುದ್ರ ಕಿನಾರೆಯಲ್ಲಿ ಎಸೆಯುತ್ತಿರುವುದಾಗಿ ದೂರಲಾಗಿದೆ.

೨೦೨೫ ಜನವರಿ ೨೬ರಂದು ಕಾಸರಗೋಡನ್ನು ತ್ಯಾಜ್ಯಮುಕ್ತ ಗೊಳಿಸುವ ಕಾರ್ಯಕ್ರಮ ನಡೆಯಲಿರುವುದು. ಮನೆಗಳಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಲು ಹಸಿರು ಕ್ರಿಯಾ ಸೇನೆ ತಲುಪುತ್ತಿದೆ. ಹಾಗಿದ್ದರೂ ತ್ಯಾಜ್ಯಗಳನ್ನು ಸಮುದ್ರ ಕಿನಾರೆ ಸಹಿತ ವಿವಿಧೆಡೆ ಎಸೆಯುವವರೂ ಇದ್ದಾರೆಂದು ದೂರಲಾಗಿದೆ.

Leave a Reply

Your email address will not be published. Required fields are marked *

You cannot copy content of this page