ಯು.ಕೆ. ವಿಸಾ ಭರವಸೆ : 16.8 ಲಕ್ಷ ರೂ. ವಂಚನೆ
ಕಾಸರಗೋಡು: ಯು.ಕೆ. ವಿಸಾ ಭರವಸೆ ನೀಡಿ 16,80,000 ರೂ. ಅಪಹರಿಸಿರುವುದಾಗಿ ದೂರು ನೀಡಲಾಗಿದೆ. ಚಿತ್ತಾರಿಕಲ್ನ ಜೈಸನ್ ಜೇಮ್ಸ್ರ ಪತ್ನಿ ದಿವ್ಯಾ ಪಿ. ಥೋಮಸ್ರ ದೂರಿನಂತೆ ಇಬ್ಬರ ವಿರುದ್ಧ ಚಿತ್ತಾರಿಕಲ್ ಪೊಲೀಸರು ಕೇಸು ದಾಖಲಿಸಿದ್ದಾರೆ. ತಳಿಪರಂಬ್, ನಡುವಿಲ್, ಚೊವ್ವೇಲಿ ಕುಡಿಯಿಲ್ ಹೌಸ್ನ ಜೋಸೆಫ್ (38), ಚಿತ್ತಾರಿಕಲ್ ಪಿಲಿಯನಾಡ್ ಹೌಸ್ನ ನಿತಿನ್ ಪಿ. ಜೋಯ್ (34) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. 2023 ಅಕ್ಟೋಬರ್ 7ರಿಂದ ಹಲವು ಬಾರಿಯಾಗಿ ಹಣ ಪಡೆದು ಬಳಿಕ ಹಣ ಅಥವಾ ವಿಸಾ ನೀಡದೆ ವಂಚಿಸಿರುವುದಾಗಿ ದಿವ್ಯಾ ದೂರು ನೀಡಿದ್ದಾರೆ. ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.