ಯುವಕ ಹೃದಯಾಘಾತದಿಂದ ನಿಧನ
ಕುಂಬಳೆ: ಯುವಕನೋರ್ವ ಮುಂಜಾನೆ ವೇಳೆ ಹೃದಯಾಘಾ ತದಿಂದ ಮೃತಪಟ್ಟರು. ಪೆರುವಾಡ್ ಮಾಳಿಯಂಗರದ ಕೊಗ್ಗು ಡ್ರೈವರ್ ಎಂಬವರ ಪುತ್ರ ನಾಗೇಶ್ (41) ಮೃತಪಟ್ಟ ವ್ಯಕ್ತಿ. ಇವರು ಟೈಲ್ಸ್ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದರು. ಇಂದು ಮುಂಜಾನೆ 4.30ಕ್ಕೆ ಮನೆಯಲ್ಲಿ ಹೃದಯಾಘಾತವುಂ ಟಾದ ಇವರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ತಂದೆ, ತಾಯಿ ನಾರಾಯಣಿ, ಪತ್ನಿ ಸುಪ್ರಿಯ, ಪುತ್ರ ತ್ರಿದೇವ್, ಸಹೋದರಿ ಶೈಲಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.