ಯುವಕನಿಗೆ ಇರಿದು ಕೊಲೆಗೈಯ್ಯಲೆತ್ನ: ಇಬ್ಬರ ಸೆರೆ

ಉಪ್ಪಳ: ಯುವಕನಿಗೆ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ  ಇಬ್ಬರು  ಆರೋಪಿಗಳನ್ನು ಮಂಜೇ ಶ್ವರ ಪೊಲೀಸರು ಸೆರೆಹಿಡಿದಿದ್ದಾರೆ.

ಉಪ್ಪಳ ಮಜಲ್ ನಿವಾಸಿ ಜಾವೇದ್ ಅಹಮ್ಮದ್ (೩೧), ಉಪ್ಪಳ ನಿವಾಸಿ ಮೊಹಮ್ಮದ್ ರಮೀಸ್ ರಾಸಾ (೩೮) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಉಪ್ಪಳ ಕೋಡಿಬೈಲು ನಿವಾಸಿ  ಮೊಹಮ್ಮದ್ ನವಾಸ್ (೩೭) ಎಂಬವರಿಗೆ ಇರಿದು ಕೊಲೆಗೈಯ್ಯಲು ಯತ್ನಿಸಿದ ಆರೋಪದಂತೆ ಈ ಇಬ್ಬರನ್ನು ಬಂಧಿಸಲಾಗಿದೆ. ಈ ತಿಂಗಳ ೧೫ರಂದು ರಾತ್ರಿ ಉಪ್ಪಳದಲ್ಲಿ ಮೂರು ಮಂದಿ ತಂಡ ಮೊಹಮ್ಮದ್ ನವಾಸ್‌ಗೆ ಇರಿದು ಗಾಯಗೊಳಿಸಿತ್ತು. ಈ ಪ್ರಕರಣದಲ್ಲಿ ಉಪ್ಪಳ ಪರಿಸರ ನಿವಾಸಿಯಾದ ಆಪು ಎಂಬಾತನೂ ಇದ್ದು ಆತನಿಗಾಗಿ ಶೋಧ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page