ಯುವತಿ ನಾಪತ್ತೆ

ಕುಂಬಳೆ: ಯುವತಿಯೋರ್ವೆ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉಳುವಾರು ನಿವಾಸಿ ಮೊಯ್ದೀನ್ ಎಂಬವರ ಪುತ್ರಿ ನಸ್ರೀನ (19) ನಾಪತ್ತೆಯಾದ ಯುವತಿ. ಈ ತಿಂಗಳ 13ರಂದು ರಾತ್ರಿ 11.30ರಿಂದ 14 ರಂದು ಮುಂಜಾನೆ 4 ಗಂಟೆ ಮಧ್ಯೆ ಈಕೆ ನಾಪತ್ತೆಯಾದ ಬಗ್ಗೆ ತಂದೆ ಕುಂಬಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೇಸು ದಾಖಲಿಸಿಕೊಂಡ ಪೊಲೀಸರು ಯುವತಿಯ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿರುವುದಾಗಿ ತಿಳಿದುಬಂದಿದೆ. ಇದೇ ವೇಳೆ ಕೊಡ್ಯಮ್ಮೆ ನಿವಾಸಿ ಯಾದ ಯುವಕನೊಂದಿಗೆ  ಯುವತಿ ತೆರಳಿರುವುದಾಗಿ ಸಂಶಯ ವ್ಯಕ್ತಪಡಿಸ ಲಾಗಿದೆಯೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page