ರಮೇಶ್ ಚೆನ್ನಿತ್ತಲರ ಪರ್ಯಟನೆ ನಾಳೆ

ಕಾಸರಗೋಡು: ಲೋಕಸಭಾ ಚುನಾವಣೆಗೆ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸುವ ಐಕ್ಯರಂಗದ ಅಭ್ಯರ್ಥಿ ರಾಜ್ಮೋಹನ್ ಉಣ್ಣಿತ್ತಾನ್ರ ಚುನಾವಣಾ ಪ್ರಚಾರಾರ್ಥ ನಾಳೆ ಹಿರಿಯ ಮುಖಂಡ ರಮೇಶ್ ಚೆನ್ನಿತ್ತಲ ವಿವಿಧ ಕಡೆಗಳಲ್ಲಿ ಭಾಗವಹಿಸುವರು. ಉದುಮ ಮಂಡಲದ ಕಾನತ್ತೂರಿನಿಂದ ಬೆಳಿಗ್ಗೆ 9ಕ್ಕೆ ಪರ್ಯಟನೆ ಆರಂಭಗೊಳ್ಳಲಿದೆ. ಬಳಿಕ ಪುಲ್ಲೂರು ಕಾಂಗ್ರೆಸ್ ಕಚೇರಿ ಉದ್ಘಾಟನೆ, 10.30ಕ್ಕೆ ಪ್ರೆಸ್ಮೀಟ್, 11 ಗಂಟೆಗೆ ಯುಡಿಎಫ್ ಸಂಯುಕ್ತ ಟ್ರೇಡ್ ಯೂನಿಯನ್ ನಗರಸಭಾ ಹಾಲ್ನಲ್ಲಿ ಉದ್ಘಾಟನೆ, ಅಪರಾಹ್ನ 3 ಗಂಟೆಗೆ ಪರಪ್ಪದಲ್ಲಿ ಸಾರ್ವಜನಿಕ ಸಭೆ, 4 ಗಂಟೆಗೆ ಕಾಞಂಗಾಡ್ನಲ್ಲಿ ಕುಟುಂಬ ಸಂಗಮ, 4.30ಕ್ಕೆ ನೀಲೇಶ್ವರದಲ್ಲಿ ಕುಟುಂಬ ಸಂಗಮ ಬಳಿಕ ವಿವಿಧ ಕಡೆಗಳಲ್ಲಿ ಕುಟುಂಬ ಸಂಗಮ ನಡೆಯಲಿದೆ.

RELATED NEWS

You cannot copy contents of this page