ರಸ್ತೆಗೆ ಅಡ್ಡ ಓಡಿದ ಕಾಡುಕೋಣ : ಪೊಲೀಸಧಿಕಾರಿ ಸಂಚರಿಸಿದ ಕಾರಿಗೆ ಹಾನಿ

ಕಾಸರಗೋಡು: ರಸ್ತೆಗೆ ಅಡ್ಡವಾಗಿ ಓಡಿದ ಕಾಡುಕೋಣ ಢಿಕ್ಕಿ ಹೊಡೆದು ಪೊಲೀಸ್ ಅಧಿಕಾರಿ ಸಂಚರಿಸುತ್ತಿದ್ದ ಕಾರಿಗೆ ಹಾನಿಯುಂಟಾಗಿದೆ. ಕಾಡುಕೋಣ ಢಿಕ್ಕಿ ಹೊಡೆದ ಅಪಘಾತದಿಂದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಾರು ಮಗುಚಿ ಬೀಳದಿರುವುದರಿಂದ ಭಾರೀ ಅಪಾಯ ತಪ್ಪಿಹೋಗಿದೆ.

ಆದೂರು ಪೊಲೀಸ್ ಠಾಣೆಯ ಎಎಸ್‌ಐ ರಾಜನ್ ಚಲಾಯಿಸುತ್ತಿದ್ದ ಕಾರಿಗೆ ಹಾನಿಯುಂಟಾಗಿದೆ. ಇಂದು ಮುಂಜಾನೆ ಮೂರು ಗಂಟೆ ವೇಳೆ ಇರಿಯಣ್ಣಿ- ಬೋವಿಕ್ಕಾನ ರಸ್ತೆಯಲ್ಲಿ ಚಿಪ್ಲ್ಲಿಕ್ಕಯ ಎಂಬಲ್ಲಿ ಅಪಘಾತವುಂಟಾಗಿದೆ.

ಬೆಂಗಳೂರಿನಲ್ಲಿ ಕಲಿಯುತ್ತಿರುವ ಮಗಳನ್ನು ಮನೆಗೆ ಕರೆದುಕೊಂಡು ಬರಲು ರಾಜನ್ ಕಾರಿನಲ್ಲಿ ಬೋವಿಕ್ಕಾನಕ್ಕೆ ತೆರಳುತ್ತಿದ್ದರು.

ಚಿಪ್ಲಿಕ್ಕಯ ಎಂಬಲ್ಲಿಗೆ ತಲುಪಿದಾಗ ರಸ್ತೆಗೆ ಅಡ್ಡವಾಗಿ ಓಡಿದ ಕಾಡುಕೋಣ ಕಾರಿಗೆ ಢಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ಹಾಗೂ ಗಾಜು ಪೂರ್ಣವಾಗಿ ಹಾನಿಗೊಂಡಿದೆ. ರಾತ್ರಿ ಹೊತ್ತಿನಲ್ಲಿ ವನ್ಯಮೃಗ ಉಪಟಳ ತೀವ್ರಗೊಂಡ ಪ್ರದೇಶವಾಗಿದೆ ಚಿಪ್ಲಿಕ್ಕಯ. ಪ್ರಯಾಣಿಕರಾದ ಹಲವರು ಹಲವು ಬಾರಿ ಈ ಸ್ಥಳದಲ್ಲಿ ಅಪಘಾತಕ್ಕೀಡಾಗಿದ್ದಾರೆ.

You cannot copy contents of this page