ರಾಜ್ಯದಲ್ಲಿ ಹೆಚ್ಚುತ್ತಿರುವ ವಾಹನ ಅಪಘಾತ: ಎಲ್ಲಾ ಜಿಲ್ಲಾ  ವರಿಷ್ಠ ಪೊಲೀಸ್ಅ ಧಿಕಾರಿಗಳ ತುರ್ತು ಸಭೆ ಕರೆದ ಎಡಿಜಿಪಿ

ಕಾಸರಗೋಡು: ರಾಜ್ಯದಲ್ಲಿ ವಾಹನ ಅಪಘಾತ ಇತ್ತೀಚೆಗಿನಿಂದ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಗಾರಿಕೆ ಹೊಂದಿರುವ ಎಡಿಜಿಪಿ  ಇಂದು ಆನ್‌ಲೈನ್ ಮೂಲಕ ಎಲ್ಲಾ ಜಿಲ್ಲೆಗಳ ವರಿಷ್ಠ ಪೊಲೀಸ್ ಅಧಿಕಾರಿಗಳು,  ರೇಂಜ್ ಡಿಜಿಪಿ ಹಾಗೂ ಐಜಿಗಳ ತುರ್ತು ಸಭೆ ಕರೆದಿದ್ದಾರೆ.

ಕಳೆದ ಒಂದು ವಾರದಲ್ಲಿ  ಪಾಲ್ಘಾಟ್ ಮತ್ತು ಪತ್ತನಂತಿಟ್ಟದಲ್ಲಿ ನಡೆದ ಎರಡು ಅಪಘಾತಗಳಲ್ಲಿ ಮಾತ್ರವಾಗಿ ನಾಲ್ವರು ವಿದ್ಯಾರ್ಥಿನಿಯರು ಸೇರಿದಂತೆ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಾತ್ರವಲ್ಲ ರಾಜ್ಯದ ಇತರೆಡೆಗಳಲ್ಲೂ ವಾಹನ ಅಪಘಾತಗಳು ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ಸಲುವಾಗಿ ಇಂದು  ಎಡಿಜಿಪಿ ಈ ತುರ್ತು ಸಭೆ  ಕರೆದಿರುವ ಹಿನ್ನೆಲೆಯಾಗಿದೆ.  ವಾಹನ ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ ಎಲ್ಲಾ ವಾಹನಗಳ ವೇಗ ವನ್ನು ನಿಯಂತ್ರಿಸಿ ಅಮಿತ ವೇಗದಲ್ಲಿ ಹಾಗೂ ಮದ್ಯಮದಲು ಮತ್ತು ಮಾದಕದ್ರವ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ತೀರ್ಮಾನವನ್ನೂ ಪೊಲೀಸ್ ಇಲಾಖೆ ಕೈಗೊಂಡಿದೆ. ಮಾತ್ರವಲ್ಲ ರಾಜ್ಯದಲ್ಲಿ ಅತೀ ಹೆಚ್ಚು ವಾಹನ ಅಪಘಾತಗಳು ಉಂಟಾಗುತ್ತಿ ರುವ ವಲಯಗಳನ್ನು ಗುರುತಿಸಿ ಅಲ್ಲಿ ವಿಶೇಷ ನಿಗಾ ಇರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಇದರಂತೆ  ಕಾಸರಗೋಡು ಜಿಲ್ಲೆಯ ಚೆರ್ಕಳ-ಜಾಲ್ಸೂರು ರಾಷ್ಟ್ರೀ ಯ ಹೆದ್ದಾರಿಯ ಕೋಟೂರು ತಿರುವನ್ನು ರಾಜ್ಯದ ಅತೀ ಹೆಚ್ಚು ಅಪಘಾತ ವಲಯ ಯಾದಿಯಲ್ಲಿ  ಸೇರಿಸಲಾಗಿದೆ.

ಕಳೆದ ಒಂದು ವರ್ಷದಲ್ಲಿ ಈ ತಿರುವಿನಲ್ಲಿ 15 ವಾಹನ ಅಪಘಾತಗಳು ನಡೆದಿದ್ದು, ಅದರಲ್ಲಿ 4 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು  ಗಾಯಗೊಂಡಿದ್ದಾರೆ.  ಇದನ್ನು ಪರಿಗಣಿಸಿ ಈ ತಿರುವಿನ ರಸ್ತೆಯನ್ನು ಇನ್ನಷ್ಟು ಅಗಲಗೊಳಿಸಿ ಅಗತ್ಯದ ಬದಲಾವಣೆ ತರುವ ವರದಿಯನ್ನು ತಯಾರಿಸಿ ಸಾರಿಗೆ ಇಲಾಖೆ ಸರಕಾರಕ್ಕೆ ಸಲ್ಲಿಸಿದೆ.

Leave a Reply

Your email address will not be published. Required fields are marked *

You cannot copy content of this page