ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಗೆ ಬೆಂಬಲ ವ್ಯಕ್ತಪಡಿಸಿದ ಎಂ.ಎಲ್. ಅಶ್ವಿನಿ
ಮಂಜೇಶ್ವರ: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ರಾಷ್ಟ್ರೀಯ ಹೆದ್ದಾರಿ ಹೋ ರಾಟ ಸಮಿತಿ ಕಳೆದ ೩೫ ದಿನಗಳಿಂದ ನಡೆಸಿ ಕೊಂಡು ಬರುತ್ತಿರುವ ಹೋರಾಟಕ್ಕೆ ಎನ್ಡಿಎ ಉಮೇದ್ವಾರೆ ಎಂ.ಎಲ್. ಅಶ್ವಿನಿಯವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಹೋರಾಟ ಸಮಿತಿ ನಡೆಸುತ್ತಿ ರುವ ಸ್ಥಳಕ್ಕೆ ಎಂ.ಎಲ್. ಅಶ್ವಿನಿಯವರ ನೇತೃತ್ವ ದಲ್ಲಿ ಬಿಜೆಪಿ ನೇತಾರರು ನಿನ್ನೆ ಆಗಮಿಸಿ ಹೋರಾಟಗಾರರಲ್ಲಿ ಐಕ್ಯದಾಢ್ಯ ಪ್ರದರ್ಶಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿ ವಿಷಯಗಳನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೇಂದ್ರ ಭೂಸಾರಿಗೆ ಸಚಿವಾಲಯದ ಗಮನಕ್ಕೆ ತರುವಲ್ಲಿ ಹಾಗೂ ಡಿಪಿಆರ್ನಲ್ಲಿ ಲೋಪದೋಷಗಳಿದ್ದಲ್ಲಿ ಅದನ್ನು ಗಮನಕ್ಕೆ ತಂದು ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಕ್ಷೇತ್ರದ ಸಂಸದರು ತೋರಿರುವ ನಿರ್ಲಕ್ಷ್ಯವೇ ಇಂತಹ ಸಮಸ್ಯೆಗಳಿಗೆ ಕಾರಣವಾಗಿದೆ ಯೆಂದು ಅಶ್ವಿನಿ ಹೇಳಿದರು.
ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜನ್ನು ಎಡರಂಗ, ಐಕ್ಯರಂಗ ಸದಾ ಅವಗಣಿಸುತ್ತಾ ಬಂದಿರುವೆ. ಅದೇ ಅವಸ್ಥೆಯನ್ನು ಇಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲೂ ಕಾಣಬಹುದಾಗಿದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ವಿಶೆಷ ಕ್ರಮೀಕರಣಗಳನ್ನು ನಡೆಸಬೇಕು ಇತ್ಯಾದಿ ಮಾನವೀಯ ಪರಿಗಣನೆಗಳ ಬೇಡಿಕೆಗಳಿಗೆ ನಾನು ಬೆಂಬಲ ನೀಡುವು ದಾಗಿಯೂ ಅಶ್ವಿನಿ ಹೇಳಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವಿಜಯ ಕುಮಾರ್ ರೈ, ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಉಪಾಧ್ಯಕ್ಷ ಯಾದವ್ ಬಜಾಜೆ, ರಾಜ್ಯ ಸಮಿತಿ ಸದಸ್ಯ ಹರಿಶ್ಚಂದ್ರ ಮಂಜೇಶ್ವರ ಮೊದಲಾದವರು ಹೋರಾಟ ವೇದಿಕೆಗೆ ಅಶ್ವಿನಿಯವರ ಜತೆ ಆಗಮಿಸಿದರು.