ರಾಹುಲ್ ಗಾಂಧಿ ವಿರುದ್ಧ ಸುಳ್ಳು ಪ್ರಕರಣ ದಾಖಲು: ಕಾಂಗ್ರೆಸ್ ಪ್ರತಿಭಟನೆ
ಮಂಜೇಶ್ವರ: ಕೇಂದ್ರ ಸರಕಾರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನಾ ಕಾರ್ಯಕ್ರಮಗಳಿಂದ ಜನತೆಯ ಗಮನ ಬೇರೆಡೆ ಸೆಳೆಯಲು ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಸುಳ್ಳು ಕೇಸು ದಾಖಲಿಸಲಾಗಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ. ಜನತೆಯು ಪ್ರಜಾತಾಂತ್ರಿಕ ರೀತಿಯಲ್ಲಿ ನಡೆಸುವ ಹೋರಾಟಗಳನ್ನು ನಕಲಿ ಕೇಸ್ ಮೂಲಕ ಹತ್ತಿಕ್ಕುವ ವಿಫಲ ಪ್ರಯತ್ನ ನಡೆಯುತ್ತಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ರನ್ನು ಅಪಮಾನಿಸುವುದನ್ನು ಸಂಘ ಪರಿವಾರ ಒಂದು ಹೆಮ್ಮೆಯ ವಿಚಾರವಾಗಿ ಪರಿಗಣಿಸಿದೆ. ಈ ಸರಕಾರವು ಅಧಿಕಾರದಿಂದ ತೊಲಗುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದು ಅವರು ಹೇಳಿದ್ದಾರೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸುಳ್ಳು ಕೇಸು ದಾಖಲು ಮಾಡಿ ಕಿರುಕುಳ ನೀಡುತ್ತಿರುವ ಷಾ ವಿರುದ್ಧ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯು ಹೊಸಂಗಡಿಯಲ್ಲಿ ನಡೆಸಲಾದ ಪ್ರತಿಭಟನಾ ಸಂಗಮದಲ್ಲಿ ಅವರು ಮಾತನಾಡಿದರು. ಹರ್ಷದ್ ವರ್ಕಾಡಿ, ಚಂದ್ರಶೇಖರ ಶೆಟ್ಟಿ ಬೆಜ್ಜ, ಪುರುಷೋತ್ತಮ ಅರಿಬೈಲ್, ಹನೀಫ್ ಪಡಿಂಞÁರ್, ದಾಮೋದರ ಮಾಸ್ಟರ್, ಓಂ ಕೃಷ್ಣ, ಬಿ ಎಂ ಮನ್ಸೂರ್, ಸತೀಶ್ ಅಡಪ್ಪ ಸಂಕಬೈಲ್, ನಾಗೇಶ್ ಮಂಜೇಶ್ವರ, ಮೊಹಮ್ಮದ್ ಮಜಾಲ್, ಗಣೇಶ್ ಪಾವೂರು, ಮೊಹಮ್ಮದ್ ಜೆ, ಸದಾಶಿವ ಕೆ, ವಸಂತ ರಾಜ್ ಶೆಟ್ಟಿ, ಅಜೀಜ್ ಕಲ್ಲೂರು, ಇರ್ಷಾದ್ ಮಂಜೇಶ್ವರ, ಹಮೀದ್ ಕಳಿಯೂರು, ಎ ಎಂ ಉಮ್ಮರ್ ಕುಂಞÂ, ನವೀನ್, ಮಾಲಿಂಗ ಮಂಜೇಶ್ವರ, ರಂಜಿತ್ ಮಂಜೇಶ್ವರ, ವಿನೋದ್ ಪಾವೂರು, ಮೊಹಮ್ಮದ್ ಕೆದುಂಬಾಡಿ, ಜೆಸ್ಸಿ ಕಣ್ವತೀರ್ಥ, ರಾಮ್ ಭಟ್ ಮೀಂಜ, ಆರಿಫ್ ಮಚ್ಚಂಪಾಡಿ, ಮೊಹಮ್ಮದ್ ಹಾಜಿ, ಮುಸ್ತಫಾ ಮಂಜೇಶ್ವರ ಉಪಸ್ಥಿತರಿದ್ದರು. ಮುಹಮ್ಮದ್ ಸೀಗಂದÀಡಿ ಸ್ವಾಗತಿಸಿ, ಖಲೀಲ್ ಬಜಾಲ್ ವಂದಿಸಿದರು.