ರಾಹುಲ್ ಹೇಳಿಕೆಗೆ ಪ್ರತಿಭಟನೆ: ಉಪ್ಪಳದಲ್ಲಿ ವಿಶ್ವಹಿಂದೂ ಪರಿಷತ್‌ನಿಂದ ಬೃಹತ್ ಮೆರವಣಿಗೆ

ಉಪ್ಪಳ: ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯ ಹಿಂದÀÆ ವಿರೋಧಿ ಹೇಳಿಕೆ ಪ್ರತಿಭಟಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ,ಮಾತೃ ಶಕ್ತಿ, ದುರ್ಗಾವಾಹಿನಿ, ಮಂಗಲ್ಪಾಡಿ ಖಂಡ ಸಮಿತಿ ವತಿಯಿಂದ ಉಪ್ಪಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಿನ್ನೆ ಸಂಜೆ ನಡೆಯಿತು. ಮೆರವಣಿಗೆಯು ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಿಂದ ಹೊರಟು ಉಪ್ಪಳ ಪೇಟೆಯಲ್ಲಿ ಸಮಾಪ್ತಿಗೊಂಡಿತು. ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯ ಅನಿಲ್ ಮಣಿಯಂಪಾರೆ ಮಾತನಾಡಿದರು. ವಿಶ್ವಹಿಂದೂ ಪರಿಷತ್, ಬಿಜೆಪಿ ಸಹಿತ ಸಂಘ ಪರಿವಾರದ ನೇತಾರು, ಕಾರ್ಯಕರ್ತರು ಹಾಗೂ ಮಾತೆಯರು ಭಾಗವಹಿಸಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಯಾದವ ಕೀರ್ತೇಶ್ವರ ಸ್ವಾಗತಿಸಿ, ಬಿಜೆಪಿ ನೇತಾರ ಹರಿಶ್ಚಂದ್ರ ಮಂಜೇಶ್ವರ ವಂದಿಸಿದರು.

You cannot copy contents of this page