ರಿಪ್ಪರ್ ಮಾದರಿಯಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದು ಐದು ಮಂದಿಯ ಭೀಕರ ಕಗ್ಗೊಲೆ
ತಿರುವನಂತಪುರ: ರಿಪ್ಪರ್ ಮಾದರಿಯಲ್ಲಿ ಎರಡು ತಾಸುಗಳೊಳಗೆ ಮೂರು ಕಡೆಗಳಲ್ಲಾಗಿ ಸುತ್ತಿಗೆಯಿಂದ ಹೊಡೆದು ಸಹೋದರ, ಪ್ರಿಯತಮೆ ಸೇರಿದಂತೆ ಸ್ವಂತ ಕುಟುಂಬದ 5 ಮಂದಿಯನ್ನು ಯುವಕ ಸುತ್ತಿಗೆಯಿಂದ ಹೊಡೆದು ಬೀಭತ್ಸ ರೀತಿಯಲ್ಲಿ ಸರಣಿ ಕಗ್ಗೊಲೆ ನಡೆಸಿದ ಘಟನೆ ರಾಜ್ಯರಾಜಧಾನಿಯಾದ ತಿರುವನಂ ತಪುರದಲ್ಲಿ ನಡೆದಿದೆ.
ತಿರುವನಂತಪುರ ವೆಂuಟಿಜeಜಿiಟಿeಜರ ಮೂಡ್ ಪೆರುಮಲ ನಿವಾಸಿ ಸಲಾಸಿಲ್ ಹಾಸ್ನ ಎ.ಆರ್ .ಅಫ್ನಾಸ್ (23) ಈ ಸರಣಿ ಕೊಲೆ ನಡೆಸಿದ ಆರೋಪಿ. ತನ್ನ ಅಜ್ಜಿ ಪಾಂuಟಿಜeಜಿiಟಿeಜಟ್ಟ್ನ ಸಲ್ಮಾ ಬೀವಿ (95)ಳನ್ನು ಆರೋಪಿ ಮೊದಲು ಆಕೆಯ ಮನೆಯಲ್ಲೇ ಕೊಲೆಗೈದು ನಂತರ ಚುಳ್ಳಿ ಮಾನೂರುನಲ್ಲಿರುವ ತನ್ನ ತಂದೆಯ ಸಹೋದರ ಲತೀಫ್ (69), ಅವರ ಪತ್ನಿ ಶಾಹಿದಾ (59) ಆ ಬಳಿಕ ಆರೋಪಿ ತನ್ನ ಸ್ವಂತ ಮನೆಯಲ್ಲಿ ಆತನ ಸಹೋದರ ಅಫ್ನಾನ್(13) ಮತ್ತು ಪ್ರೇಯಸಿ ಫರ್ನಾನ್ (19) ಎಂಬವರನ್ನು ಕೊಲೆಗೈದಿದ್ದಾನೆ. ಸುತ್ತಿಗೆಯಿಂದ ಹೊಡೆದು ಈ ಐದು ಮಂದಿಯ ಕೊಲೆಗೈಯ್ಯಲಾಗಿದೆ. ಕೊಲೆ ಅದೆಷ್ಟು ಭೀಕರವಾಗಿತ್ತೆಂದರೆ ಗುರುತುಹಚ್ಚಲು ಸಾಧ್ಯವಾಗದ ರೀತಿಯಲ್ಲಿ ಮುಖ ಮತ್ತು ದೇಹದ ಭಾಗಗಳನ್ನು ವಿಕೃತಗೊಳಿಸಲಾಗಿತ್ತು. ಈ ಘಟನೆ ಇಡೀ ಕೇರಳವನ್ನೇ ನಡುಗಿಸುವಂತೆ ಮಾಡಿದೆ.
ಕೊಲೆ ನಡೆದ ಬಳಿಕ ಆರೋಪಿ ಅಫ್ನಾನ್ ವಿಷ ಸೇವಿಸಿ ನೇರವಾಗಿ ಪೊಲೀಸ್ ಠಾಣೆಗೆ ಹಾಜರಾಗಿ ತಾನು ಐದು ಮಂದಿಯನ್ನು ಕೊಲೆಗೈದಿರು ವುದಾಗಿ ಪೊಲೀಸರಲ್ಲಿ ಒಪ್ಪಿಕೊಂಡಿ ದ್ದಾನ. ಅದರಂತೆ ಆತನನ್ನು ಪೊಲೀಸರು ವಶಕ್ಕೆ ತೆಗೆದು ನಂತರ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಆರೋಪಿ ತನ್ನ ತಾಯಿ ಶಮಿಯನ್ನೂ ಕೊಲೆಗೈಯ್ಯಲೆತ್ನಿಸಿದ್ದು, ಆಕೆಯನ್ನು ಗಂಭೀರಾವಸ್ಥೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಆರೋಪಿ ಮಾದಕದ್ರವ್ಯ ವ್ಯಸನಿಯಾಗಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆತ ಪ್ರೇಯಸಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದು ಅಲ್ಲಿ ಆಕೆಯನ್ನು ಸಹೋದರನ ಜೊತೆ ಕೊಂದಿದ್ದಾನೆAದು ಪೊಲೀಸರು ತಿಳಿಸಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕೊಲೆ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ.