ರಿಯಾಸ್ ಮೌಲವಿ ಕೊಲೆ ಪ್ರಕರಣ: ತೀರ್ಪು ಮಾರ್ಚ್ ೭ಕ್ಕೆ ಮುಂದೂಡಿಕೆ
ಕಾಸರಗೋಡು: ೨೦೧೭ ಮಾರ್ಚ್ ೨೦ರಂದು ರಾತ್ರಿ ಕಾಸರಗೋಡು ಹಳೇ ಸೂರ್ಲುವಿನ ಮದ್ರಸಾ ಅಧ್ಯಾಪಕ ಮೂಲತಃ ಕೊಡಗು ನಿವಾಸಿ ಮೊಹಮ್ಮದ್ ರಿಯಾಸ್ ಮೌಲವಿ (೨೭)ರನ್ನು ಕೊಲೆಗೈದ ಪ್ರಕರಣದ ತೀರ್ಪನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಮಾರ್ಚ್ ೭ಕ್ಕೆ ಮುಂದೂಡಿದೆ.
ಈ ಪ್ರಕರಣದ ತೀರ್ಪು ನೀಡುವ ದಿನಾಂಕವನ್ನು ನ್ಯಾಯಾಲಯ ಕಳೆದ ವಾರಇಂದಿಗೆ ನಿಗದಿಪಡಿಸಿತ್ತು. ಅದನ್ನು ಈಗ ಮುಂದೂ ಡಲಾಗಿದೆ.