ರಿಯಾಸ್ ಮೌಲವಿ ಕೊಲೆ ಪ್ರಕರಣದ ತೀರ್ಪು: ಜನಪರ ಸಮಾವೇಶಕ್ಕೆ ಅನುಮತಿ ರದ್ದು
ಕಾಸರಗೋಡು: ಕಾಸರಗೋಡು ಹಳೆ ಸೂರ್ಲಿನ ಮದ್ರಸಾ ಅಧ್ಯಾಪಕ ರಿಯಾಸ್ ಮೌಲವಿ (೨೮) ಕೊಲೆ ಪ್ರಕರಣದ ತೀರ್ಪಿನ ಬಗ್ಗೆ ಕಾಸರಗೋಡು ಕೋ-ಓರ್ಡಿನೇಶನ್ ಸಮಿತಿಯ ನೇತೃತ್ವದಲ್ಲಿ ಕಾಸರಗೋ ಡು ಮುನಿಸಿಪಲ್ ಕಾನ್ಫರೆನ್ಸ್ ಹಾಲ್ನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಜನಪರ ಸಮಾವೇಶಕ್ಕೆ ನೀಡಲಾದ ಅನುಮತಿಯನ್ನು ಕಾಸರಗೋಡು ಪೊಲೀಸರು ನೀಡಿರುವ ಸೂಚನೆ ಪ್ರಕಾರ ನಗರಸಭಾ ಕಾರ್ಯದರ್ಶಿ ರದ್ದುಪಡಿಸಿದ್ದಾರೆ.ರಿಯಾಸ್ ಮೌಲವಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಮತ್ತು ನ್ಯಾಯ ಎಂಬ ವಿಷಯದ ಬಗ್ಗೆ ಸಮಾವೇಶ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಸಮಾವೇಶ ಊರಿನ ನೆಮ್ಮದಿ ಜೀವನಕ್ಕೆ ಭಂಗ ತರಲು ಕಾರಣವಾಗಲಿದೆ. ಮಾತ್ರವಲ್ಲ ಕಾನೂನು ಮತ್ತು ಸುವ್ಯವಸ್ಥೆಗಳಿಗೆ ದಾರಿ ಮಾಡುವ ಸಾಧ್ಯತೆ ಇದೆಯೆಂದು ಪೊಲೀಸರು ತಿಳಿಸಿದ್ದು, ಆ ಹಿನ್ನೆಲೆಯಲ್ಲಿ ನಗರಸಭಾ ಕಾರ್ಯದರ್ಶಿ ಈ ಸಮಾವೇಶಕ್ಕೆ ಅನುಮತಿ ರದ್ದುಪಡಿಸಿದ್ದಾರೆ.