ರೈಲ್ವೇ ಅಭಿವೃದ್ಧಿ: ಕೇಂದ್ರ ಸಚಿವರೊಂದಿಗೆ ಸಂಸದ ಚರ್ಚೆ
ಕಾಸರಗೋಡು: ಲೋಕಸಭಾ ಮಂಡಲದ ವಿವಿಧ ರೈಲ್ವೇ ಸ್ಟೇಶನ್ಗಳ ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ರೊಂದಿಗೆ ಚರ್ಚೆ ನಡೆಸಿರುವುದಾಗಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ. ಕೋವಿಡ್ ಕಾಲದಲ್ಲಿ ನಿಲುಗಡೆಗೊಳಿಸಿದ ರೈಲು ಗಾಡಿಗಳ ಸ್ಟೋಪ್ ಪುನರ್ ಸ್ಥಾಪಿಸಬೇಕೆಂದು, ಹೆಚ್ಚುವರಿ ರೈಲು ಗಾಡಿಗಳಿಗೆ ಪ್ರಧಾನ ಸ್ಟೇಶನ್ಗಳಲ್ಲಿ ಸ್ಟೋಪ್ ಮಂಜೂರು ಮಾಡಬೇಕೆಂದು ಮಾತುಕತೆಯಲ್ಲಿ ಸಂಸದರು ಆಗ್ರಹಿಸಿದ್ದಾರೆ. ಸಂಸದರ ಬೇಡಿಕೆಗೆ ಅರ್ಹವಾದ ಪ್ರಾಮುಖ್ಯತೆ ನೀಡಿ ಸಮಸ್ಯೆ ಪರಿಹಾರ ಉಂಟಾಗಲಿದೆ ಎಂದು ಸಚಿವರು ಭರವಸೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.