ರೈಲ್ವೇ ಇಲಾಖೆ ಸ್ಥಳದಿಂದ ಮರ ಕಳವು: ಓರ್ವ ಆರೋಪಿ ಸೆರೆ

ಉಪ್ಪಳ:  ಮಂಜೇಶ್ವರದಲ್ಲಿ ರೈಲ್ವೇ ಇಲಾಖೆಯ ಸ್ಥಳದಿಂದ ತೇಗಿನ ಮರ ಕಳವುಗೈದು ಸಾಗಾಟ ನಡೆಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಬಂಗ್ರಮಂಜೇಶ್ವರ ಚೆಕ್‌ಪೋಸ್ಟ್ ಬಳಿಯ ರಹ್ಮತ್ ಮಂಜಿಲ್ ನಿವಾಸಿ  ಮೊನುದ್ದೀನ್ ಶಿಹಾದ್ ಸಿ.ಎ (32) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಕಳೆದ ಮಾರ್ಚ್ 10 ಹಾಗೂ 13ರ ಮಧ್ಯೆ ಮಂಜೇಶ್ವರ ಚೆಕ್‌ಪೋಸ್ಟ್ ಬಳಿಯಲ್ಲಿ ರೈಲ್ವೇ ಇಲಾಖೆಯ ಅಧೀನದಲ್ಲಿರುವ ಸ್ಥಳದಿಂದ ಭಾರೀ ಮೌಲ್ಯದ ತೇಗಿನಮರ ಕಳವಿಗೀಡಾಗಿತ್ತು. ಈ ಬಗ್ಗೆ ರೈಲ್ವೇ ಅಧಿಕಾರಿಗಳು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಯ ಕುರಿತು ಮಾಹಿತಿ ಸಂಗ್ರಹಿಸಿದ ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಕೆ. ರಾಜೀವ್ ಕುಮಾರ್ ನೇತೃತ್ವದ ಪೊಲೀಸರು ನಿನ್ನೆ ಆರೋಪಿಯನ್ನು ಆತನ ಮನೆ ಪರಿಸರದಿಂದ ಸೆರೆಹಿಡಿದಿ ದ್ದಾರೆ. ಬಳಿಕ ಆತನನ್ನು ಮರ ಕಳವಿ ಗೀಡಾದ ಸ್ಥಳಕ್ಕೆ ತಲುಪಿಸಿ ಮಾಹಿತಿ ಸಂಗ್ರಹಿಸಲಾಯಿತು. ಆರೋಪಿ ಂiiನ್ನು ಇಂದು ನ್ಯಾಯಾ ಲಯಕ್ಕೆ  ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಈ ಪ್ರಕರ ಣದಲ್ಲಿ ಇನ್ನು ಕೂಡಾ ಆರೋಪಿ ಗಳಿರ ಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page