ವಯನಾಡಿನಲ್ಲಿ ರಾಹುಲ್ ವಿರುದ್ಧ ಕೆ. ಸುರೇಂದ್ರನ್

ವಯನಾಡು: ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಯುಡಿಎಫ್ ಉಮೇದ್ವಾರರಾಗಿ ಮತ್ತೆ ಸ್ಪರ್ಧಿಸುತ್ತಿರುವ   ಈ ಕ್ಷೇತ್ರದ ಹಾಲಿ ಸಂಸದರೂ, ಕಾಂಗ್ರೆಸ್‌ನ ವರಿಷ್ಠ ನಾಯಕರೂ ಆಗಿರುವ ರಾಹುಲ್ ಗಾಂಧಿ ವಿರುದ್ಧ ಎನ್‌ಡಿಎ ಉಮೇದ್ವಾರರಾಗಿ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆಯೆಂಬುವುದಕ್ಕೆ ಕೊನೆಗೂ ಉತ್ತರ ಲಭಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್‌ರನ್ನೇ ಎನ್‌ಡಿಎ ಉಮೇದ್ವಾರರನ್ನಾಗಿ ಬಿಜೆಪಿ ಕಣಕ್ಕಿಳಿಸಿದೆ. ಇನ್ನೊಂದೆಡೆ  ಎಡರಂಗ ಉಮೇದ್ವಾರರಾಗಿ ಸಿಪಿಐ ಹಿರಿಯ ನಾಯಕಿ ಅನಿ ರಾಜ ಸ್ಪರ್ಧಿಸುತ್ತಿದ್ದಾರೆ. ಕೇಂದ್ರ ಮಟ್ಟದಲ್ಲಿ ಸಿಪಿಐ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ ಕೇರಳದಲ್ಲಿ ಆ ಪಕ್ಷ ಅದೂ ಕಾಂಗ್ರೆಸ್‌ನ ವರಿಷ್ಠ ನಾಯಕ ರಾಹುಲ್ ಗಾಂಧಿ ವಿರುದ್ಧವೇ ಕಣಕ್ಕಿಳಿದಿರುವುದು ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ತೀವ್ರ ಗೊಂದಲ ಸೃಷ್ಟಿಸಿದೆ.

2019ರಲ್ಲಿ ಈ ಕ್ಷೇತ್ರದಲ್ಲಿ ರಾಹುಲ್ ಗಾಂಧಿ 4,31,770 ಮತ ಗಳ ಭಾರೀ ಅಂತರದಲ್ಲಿ ಗೆದ್ದುಕೊಂಡಿ ದ್ದರು.  ಅಂದು ಈ ಕ್ಷೇತ್ರದಲ್ಲಿ ಎಡರಂಗದ ಉಮೇದ್ವಾರರಾಗಿ ಸ್ಪರ್ಧಿಸಿದ ಸಿಪಿಎಂನ ಪಿ.ಕೆ. ಸುನಿಲ್ ಮತ್ತು ಎನ್‌ಡಿಎ ಉಮೇದ್ವಾರರಾಗಿ ಬಿಡಿಜೆಎಸ್‌ನ ತುಷಾರ್ ವೆಳ್ಳಾಪಳ್ಳಿ ಸ್ಪರ್ಧಿಸಿದ್ದರು. ರಾಹುಲ್ ಗಾಂಧಿಗೆ 7,06,367 ಮತಗಳು ಲಭಿಸಿದರೆ ಎಡರಂಗಕ್ಕೆ 2,74,597 ಮತ್ತು ಎನ್‌ಡಿಎಗೆ 71,816 ಮತಗಳು ಲಭಿಸಿದ್ದವು. ಸುಲ್ತಾನ್ ಬತ್ತೇರಿ, ಕಲ್ಪೆಟ್ಟಾ, ಎರನಾಡು, ವಂಡೂರು, ಮಾನಂತವಾಡಿ, ತಿರುವಂಬಾಡಿ ಮತ್ತು ನಿಲಂಬೂರು ಎಂಬೀ ವಿಧಾನಸಭಾ ಕ್ಷೇತ್ರಗಳು ಒಳಗೊಂಡಿ ರುವ  ಲೋಕಸಭಾ ಕ್ಷೇತ್ರವಾಗಿದೆ ವಯನಾಡು.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಹುಲ್‌ಗಾಂಧಿ, ಬಿಜೆಪಿಯ ಕೆ. ಸುರೇಂದ್ರನ್, ಸಿಪಿಐಯ ಅನಿರಾಜ್ ಮಧ್ಯೆ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದ ರಿಂದಾಗಿ ಅದೃಷ್ಟ ಯಾರಿಗೆ ಒಲಿಯಬಹುದೆಂಬುವುದನ್ನು  ಅಮತದಾರರೇ ತೀರ್ಮಾನಿ ಸಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page