ವರ್ಕಾಡಿ ಪಂಚಾಯತ್ ಸದಸ್ಯರು, ನೌಕರರ ಪ್ರವಾಸ: ಅಪಪ್ರಚಾರ ವಿರುದ್ಧ ದೂರು ನೀಡಿದ ಪಂ. ಅಧ್ಯಕ್ಷೆ
ವರ್ಕಾಡಿ: ವರ್ಕಾಡಿ ಪಂಚಾ ಯತ್ ಆಡಳಿತ ಸಮಿತಿ ಹಾಗೂ ನೌಕರರು ಕುಟುಂಬ ಸಹಿತ ನಡೆಸಿದ ಪ್ರವಾಸ ಕೋರೆ, ಫ್ಯಾಕ್ಟರಿ ಮಾಲಕರ ಹಾಗೂ ಗುತ್ತಿಗೆದಾರರ ವೆಚ್ಚದಲ್ಲಿ ಎಂದು ಕೆಲವು ಪತ್ರಿಕೆ ಹಾಗೂ ಆನ್ಲೈನ್ ಮೀಡಿಯಾಗಳಲ್ಲಿ ನಡೆಸಿದ ಅಪಪ್ರಚಾರದ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸೈಬರ್ ಸೆಲ್ಗೂ ದೂರು ನೀಡಲಾಗಿ ದಯೆಂದು ಪಂ. ಅಧ್ಯಕ್ಷೆ ಭಾರತಿ ಎಸ್ ತಿಳಿಸಿದ್ದಾರೆ.
ಪಂಚಾಯತ್ ಆಡಳಿತ ಸಮಿತಿ ಯ ತೀರ್ಮಾನ ಪ್ರಕಾರವಾಗಿದೆ ವಯನಾಡು, ಊಟಿ ಮೊದಲಾದ ಸ್ಥಳಗಳಿಗೆ ಪ್ರವಾಸ ನಡೆಸಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಪ್ರವಾಸ ಹೋದವರು ಸ್ವಂತ ಹಣವನ್ನು ವೆಚ್ಚ ಮಾಡಿರುವುದು. ಸರಕಾರ ಪ್ರವಾಸಿ ಕೇಂದ್ರಗಳಾಗಿ ಘೋಷಿಸಿದ ಸ್ಥಳಗಳಿಗೆ ಪ್ರವಾಸ ಹೋಗಲು ಎಲ್ಲರಿಗೂ ಸ್ವಾತಂತ್ರ್ಯ ಅಧಿಕಾರವಿದೆಯೆಂದು ಅಧ್ಯಕ್ಷೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಂಚಾಯತ್ ಸದಸ್ಯರಲ್ಲಿ ರಾಜಕೀಯ ಭಿನ್ನಾಭಿಪ್ರಾಯವಿದ್ದರೂ ಪಂಚಾಯತ್ನ ಅಭಿವೃದ್ಧಿಯಲ್ಲಿ ಎಲ್ಲರೂ ಒಗ್ಗಟ್ಟಿನಲ್ಲಿರುವುದಾಗಿ ಅಧ್ಯಕ್ಷೆ ತಿಳಿಸಿದ್ದಾರೆ.
ಪ್ರವಾಸದ ಬಗ್ಗೆ ಸದಸ್ಯರು ಅವರ ಗ್ರೂಪ್ನಲ್ಲಿ ಹಾಕಿದ ಮಾಹಿತಿಗಳನ್ನು ಅನುಮತಿ ರಹಿತವಾಗಿ ಪ್ರತಿಮಾಡಿ ಕೆಲವು ವಾಟ್ಸಪ್ ಗ್ರೂಪ್ಗಳಲ್ಲಿ ಅಪಮಾನಕರವಾದ ರೀತಿಯಲ್ಲಿ ಪ್ರಚಾರಪಡಿಸಲಾಗುತ್ತಿದೆಯೆಂದೂ ಪಂ. ಅಧ್ಯಕ್ಷೆ ನೀಡಿದ ದೂರಿನಲ್ಲಿ ತಿಳಿಸಿದ್ದು, ಈ ಬಗ್ಗೆ ತನಿಖೆ ನಡೆಸಲು ಆಗ್ರಹಿಸಿದ್ದಾರೆ.