ವರ್ಕಾಡಿಯಲ್ಲಿ ೧೦ ವರ್ಷದ ಹಿಂದೆ ಒಂದು ಕೋಟಿ ೬೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಆಸ್ಪತ್ರೆ ಕಟ್ಟಡದ ಬೀಗ ಇನ್ನೂ ತೆರೆದಿಲ್ಲ
ವರ್ಕಾಡಿ: ಒಂದು ಕೋಟಿ ೬೫ ಲಕ್ಷ ರೂ. ವೆಚ್ಚದಲ್ಲಿ ೧೦ ವರ್ಷದ ಹಿಂದೆ ವರ್ಕಾಡಿ ಪಂ.ನ ಮಜೀರ್ಪಳ್ಳ ಧರ್ಮನಗರದಲ್ಲಿ ನಿರ್ಮಿಸಿದ ಕುಟುಂಬಾರೋಗ್ಯ ಕೇಂದ್ರವನ್ನು ಇನ್ನೂ ಉದ್ಘಾಟಿಸದಿದ್ದರೆ ಮುಸ್ಲಿಂ ಲೀಗ್ ಪ್ರತಿಕ್ರಿಯಾತ್ಮಕ ಉದ್ಘಾಟನೆ ನಡೆಸುವುದಾಗಿ ಮುಸ್ಲಿಂ ಲೀಗ್ ವರ್ಕಾಡಿ ಪಂಚಾಯತ್ ಪದಾಧಿಕಾರಿಗಳ ಸಭೆಯಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಿಂದ ಒಂದು ಕೋಟಿ ೧೦ ಲಕ್ಷ ರೂ. ಹಾಗೂ ಶಾಸಕರ ನಿಧಿಯಿಂದ ೫೦ ಲಕ್ಷ ರೂ., ಪಂಚಾಯತ್ ಪಾಲಾಗಿ ೫ ಲಕ್ಷ ರೂ. ಸೇರಿ ಐಕ್ಯರಂಗದ ಆಡಳಿತ ಕಾಲದಲ್ಲಿ ನಿರ್ಮಿಸಿದ ಆಸ್ಪತ್ರೆ ಈಗ ನಾಶದ ಸ್ಥಿತಿಯಲ್ಲಿದೆಯೆಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ. ೧೦ ವರ್ಷದ ಹಿಂದೆ ಎಲ್ಲಾ ಸಜ್ಜೀಕರಣಗಳೊಂದಿಗೆ ನಿರ್ಮಿಸಿದ ಆಸ್ಪತ್ರೆ ಕಟ್ಟಡ ಉದ್ಘಾಟಿಸಿ ತೆರೆದು ಕೊಡಲು ಪಂಚಾಯತ್ ಆಡಳಿತ ಸಮಿತಿ ಆಸಕ್ತಿ ವಹಿಸುತ್ತಿಲ್ಲವೆಂದು ಸಭಯಲ್ಲಿ ಅಭಿಪ್ರಾಯಪಡಲಾಗಿದೆ. ಹಳೆಯ ಆಸ್ಪತ್ರೆ ಕಟ್ಟಡದಲ್ಲಿ ಸ್ಥಳ ಸೌಕರ್ಯದ ಕೊರತೆಯಿದ್ದು, ದಿನವೂ ೪೦೦ರ ವರೆಗೆ ರೋಗಿಗಳು ತಲುಪು ತ್ತಿದ್ದು, ಅಧಿಕಾರಿಗಳಿಗೂ, ರೋಗಿಗ ಳಿಗೂ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಕಟ್ಟಡ ವನ್ನು ಉದ್ಘಾಟಿಸುವುದರೊಂದಿಗೆ ಅಗತ್ಯದ ನೌಕರರನ್ನು ನೇಮಕಗೊಳಿಸಬೇಕೆಂದು ಸಭೆ ಆಗ್ರಹಿಸಿದೆ. ಕೆ. ಮುಹ ಮ್ಮದ್ ಅಧ್ಯಕ್ಷತೆ ವಹಿಸಿದರು. ಅಬ್ದುಲ್ ಅಸೀಸ್ ಮರಿಕ್ಕೆ, ಅಬ್ದುಲ್ ಮಜೀದ್ ಬಿ.ಎ, ಎ.ಕೆ. ಆರೀಫಾ, ಸೈಫುಲ್ಲಾ ತಂಙಳ್, ಪಿ.ಬಿ. ಅಬೂಬಕರ್ ಮಾತನಾಡಿದರು.