ವಲಸೆ ಕಾರ್ಮಿಕನ ಪತ್ನಿ ಕ್ವಾರ್ಟರ್ಸ್ನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ವಲಸೆ ಕಾರ್ಮಿಕನ ಪತ್ನಿ ಕ್ವಾರ್ಟರ್ಸ್ ನೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ವಿದ್ಯಾನಗರ ಟಾಗೋರ್ ಕಾಲೇಜು ರಸ್ತೆ ಬಳಿಯಿರುವ ಕ್ವಾರ್ಟರ್ಸ್ನಲ್ಲಿ ಕಳೆದ ಒಂದು ವರ್ಷದಿಂದ ವಾಸಿಸುತ್ತಿದ್ದ ಮೂಲತಃ ಉತ್ತರಾಖಂಡ ನಿವಾಸಿ ಮುಹಮ್ಮದ್ ರಿಸಾಲ್ ಎಂಬವರ ಪತ್ನಿ ಆಯಿಷಾ (25) ಸಾವನ್ನಪ್ಪಿದ ಯುವತಿ.
ನಿನ್ನೆ ಬೆಳಿಗ್ಗೆ ಇವರು ಕ್ವಾರ್ಟರ್ಸ್ನೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿಷಯ ತಿಳಿದ ಕಾಸರಗೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತದೇಹದ ಮಹಜರು ನಡೆಸಿದ ಬಳಿಕ ಅದನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.