ವಸ್ತ್ರಾಲಯದ ಮರೆಯಲ್ಲಿ ಶಾಲಾ ಮಕ್ಕಳಿಗೆ ಇ-ಸಿಗರೇಟ್ ಮಾರಾಟ: 4 ಸಿಗರೇಟ್, 3 ಐಫೋನ್ ವಶ
ಕುಂಬಳೆ: ಬಟ್ಟೆ ಮಳಿಗೆಯ ಮರೆ ಯಲ್ಲಿ ಶಾಲಾ ಮಕ್ಕಳಿಗೆ ಇ-ಸಿಗರೇಟ್ ಮಾರಾಟ ನಡೆಸುತ್ತಿರುವುದಾಗಿ ಲಭಿಸಿದ ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಬಂದ್ಯೋಡ್ನಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಡ್ರಂಕ್ ಮೆನ್ಸ್ ವೆಡ್ಡಿಂಗ್ ಹೌಸ್ನಲ್ಲಿ ನಡೆಸಿದ ತಪಾಸಣೆಯಲ್ಲಿ ನಾಲ್ಕು ಇ-ಸಿಗರೇಟ್ಗಳನ್ನು ವಶಪಡಿ ಸಲಾಗಿದೆ. ಜೊತೆಗೆ ಅಂಗಡಿಯಿಂದ ಮೂರು ಐಫೋನ್ಗಳನ್ನು ವಶಪಡಿಸ ಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ವಾಟ್ಸಪ್ ಸಂದೇಶ ಕಳುಹಿಸಿ ಆ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುವ ತಂತ್ರ ನಡೆಸಲಾಗುತ್ತಿತ್ತು. ಈ ಫೋನ್ಗಳನ್ನು ಈಗ ವಶಪಡಿಸಲಾಗಿದೆ. ಸಂಸ್ಥೆಯ ಮೆನೇಜಿಂಗ್ ಪಾರ್ಟ್ನರ್ ಮಂಜೇಶ್ವರದ ಅಬೂಬಕ್ಕರ್ ಜಂಶೀದ್ (27), ಪಾಲುದಾರ ಶಿರಿಯ ನಿವಾಸಿ ಮೂಸ ಖಲೀಲ್ (32) ಎಂಬಿವರ ವಿರುದ್ಧ ಕೇಸು ದಾಖಲಿಸಿರುವುದಾಗಿ ಕುಂಬಳೆ ಎಸ್ಐ ಕೆ. ಶ್ರೀಜೇಶ್ ತಿಳಿಸಿದ್ದಾರೆ. ಇ-ಸಿಗರೇಟ್ ಮಾರಾಟದ ಬಗ್ಗೆ ಇನ್ನಷ್ಟು ತನಿಖೆ ನಡೆಸುವುದಾಗಿ ಎಸ್ಐ ತಿಳಿಸಿದ್ದಾರೆ.