ವಾಹನ ಅಪಘಾತ: ಇನ್ನಷ್ಟು ಬಿಗಿಗೊಂಡ ಜಂಟಿ ಕಾರ್ಯಾಚರಣೆ
ಕಾಸರಗೋಡು: ವಾಹನ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸಲು ಪೊಲೀಸರು ಮತ್ತು ಮೋಟಾರು ವಾಹನ ಇಲಾಖೆ ಜಂಟಿಯಾಗಿ ಆರಂಭಿಸಿರುವ ಕಾರ್ಯಾಚರಣೆ ಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲೂ ಇಂತಹ ಕಾರ್ಯಾಚರಣೆ ನಡೆಯುತ್ತಿದೆ.
ಇದರಂತೆ ಕಳೆದ ಮೂರು ದಿನಗಳಲ್ಲಾಗಿ ನಡೆದ ಕಾರ್ಯಾಚರಣೆ ಯಲ್ಲಿ ಸಾರಿಗೆ ಕಾನೂನು ಉಲ್ಲಂಘನೆಗೆ ಸಂಬಂಧಿಸಿ 181 ಪ್ರಕರಣ ದಾಖಲಿಸಲಾಗಿದೆ. ಈ ಮೂಲಕ ಮೋಟಾರು ವಾಹನ ಇಲಾಖೆ 4.55 ಲಕ್ಷ ರೂ. ಜುಲ್ಮಾನೆ ವಸೂಲಿ ಮಾಡಿದೆ. ಇನ್ನೊಂ ದೆಡೆ ಪೊಲೀಸರೂ ಸಮಾನ ರೀತಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ಜುಲ್ಮಾನೆ ವಸೂಲಿ ಮಾಡುತ್ತಿದ್ದಾರೆ.