ವಿವಿಧ ಕಡೆಗಳಲ್ಲಿ ಮೂವರು ಅಭ್ಯರ್ಥಿಗಳ ಪರ್ಯಟನೆ
ಕಾಸರಗೋಡು: ಐಕ್ಯರಂಗ ಅಭ್ಯ ರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ಇಂದು ಪಯ್ಯನ್ನೂರ್ ವಿಧಾನಸಭಾ ಮಂಡಲದಲ್ಲಿ ಪರ್ಯಟನೆ ನಡೆಸುವರು. ಬೆಳಿಗ್ಗೆ ಮೀಂದುಳ್ಳಿ ಪೇಟೆ ಪರಿಸರದಿಂದ ಆರಂಭಗೊಂಡ ಪರ್ಯಟನೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೋನಿ ಸೆಬಾಸ್ಟಿಯಾನ್ ಉದ್ಘಾಟಿಸಿದರು. ಬಳಿಕ ಪುಳಿಂಗೋರಿ ಕೋಲುವಳ್ಳಿ, ಚೆರುಪುಳ, ಮಚ್ಚಿಯಿಲ್ ತಟ್ಟುಮ್ಮಲ್ ಮೊದಲಾದೆಡೆಗಳಲ್ಲಿ ಸಂಚಾರ ನಡೆಸುವರು. ರಾತ್ರಿ ವಟ್ಟಿಕುಳಂನಲ್ಲಿ ಪರ್ಯಟನೆ ಸಮಾಪ್ತಿಯಾಗಲಿದೆ.
ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ನಿನ್ನೆ ತೃಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಪರ್ಯಟನೆ ನಡೆಸಿದರು. ಕುನ್ನುಂಗೈಯಲ್ಲಿ ನಡೆದ ಕಾರ್ಯಕ್ರಮವನ್ನು ಎನ್‌ಡಿಎ ಚುನಾವಣೆ ಸಮಿತಿ ಕಾಞಂಗಾಡ್ ಮಂಡಲದ ಅಧ್ಯಕ್ಷ ಕೆ.ಕೆ. ನಾರಾಯಣನ್ ಉದ್ಘಾಟಿಸಿದರು. ಬಳಿಕ ಭೀಮನಡಿ, ಎಳರಿತಟ್ಟ್, ನರ್ಕಿಲಕ್ಕಾಡ್ ಮೊದಲಾದೆಡೆಗಳಲ್ಲಿ ಸಂಚರಿಸಿದರು. ಇಂದು ಉದುಮ ಮಂಡಲದಲ್ಲಿ ಪರ್ಯಟನೆ ನಡೆಸುವರು. ಕಾರ್ನರ್ ಸಭೆ ನಡೆಸುವರು.
ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಇಂದು ಉದುಮ ವಿಧಾನಸಭಾ ಮಂಡಲದಲ್ಲಿ ದ್ವಿತೀಯ ಬಾರಿ ಪರ್ಯಟನೆ ನಡೆಸುವರು. ೨೩ ಕೇಂದ್ರಗಳಲ್ಲಿ ಇಂದು ಸ್ವಾಗತ ನೀಡಲಾಗುವುದು. ಬೆಳಿಗ್ಗೆ ಪೆರಳತ್ ನಿಂದ ಪರ್ಯಟನೆ ಆರಂಭಿಸಿದರು. ಬಳಿಕ ಉದಯನಗರ, ಅಂಬಲತ್ತರ ಮೂಲಕ ಪೆರಿಯದಲ್ಲಿ ಮತ ಯಾಚಿಸಿದರು. ರಾತ್ರಿ ೭ಕ್ಕೆ ಪೆರುಂಬ ಳದಲ್ಲಿ ಪರ್ಯಟನೆ ಸಮಾಪ್ತಿಯಾಗಲಿದೆ.