ವಿವಿಧೆಡೆ ಅಬಕಾರಿ ದಾಳಿ: ಗಾಂಜಾ, ಮದ್ಯ, ಕಳ್ಳಭಟ್ಟಿ ಸಾರಾಯಿ, ಹುಳಿರಸ ವಶ

ಕಾಸರಗೋಡು: ಅಬಕಾರಿ ತಂಡ ಜಿಲ್ಲೆಯಲ್ಲಿ ನಡೆಸಿದ ದಾಳಿಯಲ್ಲಿ ಹಲವೆಡೆಗಳಲ್ಲಿ ಗಾಂಜಾ, ಮದ್ಯ, ಕಳ್ಳಭಟ್ಟಿ ಸಾರಾಯಿ ಹಾಗೂ ಹುಳಿರಸ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಬೇಳ ಗ್ರಾಮದ ಸೀತಾಂಗೋಳಿ  ನೀರ್ಚಾಲು ರಸ್ತೆ ಬಳಿ ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ಅರುಣ್ ಕುಮಾರ್ ನೇತೃತ್ವದ ತಂಡ ನಡೆಸಿದ ವಾಹನ ತಪಾಸಣೆಯಲ್ಲಿ  ಕಾರೊಂz ರಿಂದ ೫೫ ಗ್ರಾಂ ಗಾಂಜಾವನ್ನು  ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಉಳ್ಳೋಡಿ ನಿವಾಸಿ ಕೃತಿಗುರು (32೨)ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿಇಒಗಳಾದ ಚಾರ್ಲ್ಸ್  ಜೋಸ್, ಕೆಮು ಪ್ರಿವೆಂಟೀವ್ ಆಫೀಸರ್ ಸಾಜನ್, ಅಪ್ಯಾಲ್,  ಸಿಇಒ ಮೋಹನ್ ಕುಮಾರ್ ಮತ್ತು ಚಾಲಕ ರಾಧಾಕೃಷ್ಣನ್ ಎಂಬವರು ಒಳಗೊಂಡಿದ್ದರು.

ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್ ನ ಅಸಿಸ್ಟೆಂಟ್  ಇನ್‌ಸ್ಪೆಕ್ಟರ್  (ಗ್ರೇಡ್) ಸಿ.ಕೆ.ವಿ. ಸುರೇಶ್ ನೇತೃತ್ವದ ತಂಡ ನಗರದ ಕರಂದಕ್ಕಾಡಿನ ಹಿತ್ತಿಲೊಂದರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಚ್ಚಿಡ ಲಾಗಿದ್ದ 180 ಎಂಎಲ್‌ನ 352 ಪ್ಯಾಕೆಟ್ (63.36 ಲೀಟರ್) ಕರ್ನಾ ಟಕ ನಿರ್ಮಿತ ಮದ್ಯ ವಶಪಡಿಸಿ ಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್  ಆಫೀಸರ್  (ಗ್ರೇಡ್)   ಸಿವಿಲ್ ಎಕ್ಸೈಸ್ ಆಫೀಸರ್ ಗಳಾದ ಸತೀಶನ್ ಕೆ ಮತ್ತು  ಅಶ್ವತಿ ವಿ.ವಿ ಎಂಬವರು ಒಳಗೊಂಡಿದ್ದರು.

ಇದೇ ತಂಡ ಮಧೂರಿಗೆ ಸಮೀಪದ  ಅರಂತೋಡಿನಲ್ಲಿ ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ  7.02 ಲೀಟರ್ ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿದೆ.  ಇದಕ್ಕೆ ಸಂಬಂಧಿಸಿ ಅರಂತೋಡು ನಿವಾಸಿ ಜೋಸೆಫ್ ಡಿ ಸೋಜಾ  (65) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಪ್ರಿವೆಂಟೀವ್  ಆಫೀಸರ್ (ಗ್ರೇಡ್) ನೌಶಾದ್ ಕೆ, ಸಿಇಒಗಳಾದ ರಾಜೇಶ್, ಅತುಲ್ ಎಂಬವರು  ಈ ಕಾರ್ಯಾ ಚರಣೆ ನಡೆಸಿದ ತಂಡದಲ್ಲಿ ಒಳಗೊಂ ಡಿದ್ದರು. ಇದೇ  ರೀತಿ ಸ್ಪೆಷಲ್ ಸ್ಕ್ವಾಡ್‌ಗೆ ಲಭಿಸಿದ  ಗುಪ್ತ ಮಾಹಿತಿಯಂತೆ ನೀಲೇಶ್ವರ ಅಬಕಾರಿ ರೇಂಜ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಅನೀಶ್ ಕುಮಾರ್ ಕೆ ನೇತೃತ್ವದ ಅಬಕಾರಿ ತಂಡ ವೆಳ್ಳರಿ ಕುಂಡು ಬಳಾಲ್ ಪಡಯಂಕಲ್ಲು ಎಂಬಲ್ಲಿ ನಿನ್ನೆ ನಡೆಸಿದ  ಕಾರ್ಯಾ ಚರಣೆಯಲ್ಲಿ ಕಳ್ಳಬಟ್ಟಿ ತಯಾರಿಸಲು ಸಿದ್ಧಪಡಿಸಿದ್ದ ೪೫ ಲೀಟರ್ ಹುಳಿರಸ ಮತ್ತು  ಎರಡು ಲೀಟರ್ ಸಾರಾಯಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

Leave a Reply

Your email address will not be published. Required fields are marked *

You cannot copy content of this page