ಶಬರಿ ರೈಲು ಯೋಜನೆ ವೆಚ್ಚದಲ್ಲಿ ಶೇ. ೫೦ರಷ್ಟು ವಹಿಸಲು ಸಿದ್ಧವಾದ ರಾಜ್ಯ ಸರಕಾರ

ಶಬರಿಮಲೆ:  ಅಂಗಮಾಲಿ-ಎರುಮೇಲಿ ಶಬರಿ ರೈಲು ಯೋ ಜನೆಗೆ ತಗಲುವ ನಿರ್ಮಾಣ ವೆಚ್ಚದಲ್ಲಿ ಶೇ. ೫೦ರಷ್ಟನ್ನು ಸ್ವಯಂ ವಹಿಸಲು ರಾಜ್ಯ ಸರಕಾರ ಮುಂದಾಗಿದೆ.

ಈ ವಿಷಯವನ್ನು ಪತ್ರದ ಮೂಲಕ ರೈಲ್ವೇಇಲಾಖೆಗೆ ವಿದ್ಯುಕ್ತವಾಗಿ ತಿಳಿಸುವ ತೀರ್ಮಾ ನವನ್ನು ಸರಕಾರ ಕೈಗೊಂಡಿದೆ.

ಶಬರಿ ರೈಲು ಯೋಜನೆಗೆ  ವೆಚ್ಚ ವಹಿಸುವ ಕುರಿತಾದ ಸಮಗ್ರ ಮಾಹಿತಿಯನ್ನು ಅಗತ್ಯದ ದಾಖಲು ಪತ್ರಗಳ ಸಹಿತ ತಿಳಿಸುವಂತೆ ರೈಲ್ವೇ ಇಲಾಖೆ ರಾಜ್ಯ ಸರಕಾರಕ್ಕೆ ತಿಳಿಸಿತ್ತು.  ಇದು ಒಟ್ಟಾರೆಯಾಗಿ ೩,೮೧೦ ಕೋಟಿ ರೂ. ವೆಚ್ಚ  ನಿರೀಕ್ಷಿಸುವ ಯೋಜನೆಯಾಗಿದೆ.

ಶಬರಿ ರೈಲು ಯೋಜನೆಗೆ ವರ್ಷಗಳ ಹಿಂದೆಯೇ ರೂಪು ನೀಡಲಾಗಿತ್ತು. ಆದರೆ ೨೦೧೯ ರಾಜ್ಯ ಸರಕಾರ  ಇದನ್ನು ತಾತ್ಕಾಲಿಕವಾಗಿ ಬದಿಗಿರಿಸಿತ್ತು. ಈ ಮಧ್ಯೆ ಕಳೆದ ಕೇಂದ್ರ ಬಜೆಟ್‌ನಲ್ಲಿ  ಅನಿರೀಕ್ಷಿತ ವೆಂಬಂತೆ ಪ್ರಸ್ತುತ ಯೋಜನೆಗೆ ೧೦೦ ಕೋಟಿ ರೂ. ಮೀಸಲಿರಿಸಲಾಗಿದೆ. ಅದು ಆ ಯೋಜನೆಗೆ ಮರುಜೀವ ಲಭಿಸಿದಂತಾಗಿದೆ.

ಈ ಹಿಂದಿನ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರ  ೧೧೧ ಕಿಲೋ ಮೀಟರ್ ದೀರ್ಘದ ಈ ರೈಲು ಯೋಜನೆಗೆ ರೂಪು ನೀಡಿತ್ತು. ಇದರಲ್ಲಿ ೧೪ ರೈಲ್ವೇ ಠಾಣೆಗಳನ್ನು ಒಳಪಡಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page