ಶಬರಿಮಲೆ: ಅಧಿಕ ಶುಲ್ಕ ವಸೂಲಿ ಸಲ್ಲದು-ಹೈಕೋರ್ಟ್
ಕೊಚ್ಚಿ: ಶಬರಿಮಲೆ ತೀರ್ಥಾಟ ಕರಿಂದ ಎರುಮೇಲಿ ವಾಹನ ಪಾರ್ಕಿಂ ಗ್ ಹೆಸರಲ್ಲಿ ಅಧಿಕ ಶುಲ್ಕ ವಸೂಲಿ ಮಾಡಬಾರದೆಂದೂ, ಇದನ್ನು ಸಂಬಂ ಧಪಟ್ಟವರು ಖಾತರಿಪಡಿಸುವಂ ತೆಯೂ ಹೈಕೋರ್ಟ್‌ನ ವಿಭಾಗೀಯ ಪೀಠ ನಿರ್ದೇಶ ನೀಡಿದೆ. ಎರಮೇಲಿಯಲ್ಲಿ ವಾಹನ ಪಾರ್ಕಿಂಗ್‌ಗಾಗಿ ತೀರ್ಥಾಟಕರಿಂದ ಅಮಿತ ಶುಲ್ಕ ವಸೂಲಿ ಮಾಡ ಲಾಗುತ್ತಿದೆಯೆಂಬ ದೂರು ಉಂಟಾಗಿ ದ್ದು ಅದನ್ನು ಪರಿಶೀಲಿಸಿದ ನ್ಯಾಯ ಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಜಿ. ಗಿರೀಶ್ ರನ್ನೊಳಗೊಂಡ ಹೈಕೋ ರ್ಟ್‌ನ ವಿಭಾಗೀಯ ಪೀಠ ಈ ನಿರ್ದೇಶ ನೀಡಿದೆ. ಭೋಜನ ಶಾಲೆಗಳಲ್ಲಿ ಸದಾ ಶುಚಿತ್ವ ಪಾಲಿಸಬೇಕು. ಜಿಲ್ಲಾಧಿಕಾರಿ ನೀಡಿದ ನಿರ್ದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಭಕ್ತರ ನಿಬಿಡತೆಯನ್ನು ನಿಯಂತ್ರಿಸಲು ಪತ್ತನಂತಿಟ್ಟ ಮತ್ತು ಕೋಟ್ಟಯಂ ಜಿಲ್ಲೆಗಳ ತಾಣಗಳಲ್ಲಿ ಭಕ್ತರನ್ನು ತಡೆದು ನಿಲ್ಲಿಸುವ ವೇಳೆ ಯಲ್ಲಿ ಅಲ್ಲಿ ಅನ್ನದಾನ ಮತ್ತು ವಿಶ್ರಾಂ ತಿ ಸೌಕರ್ಯವನ್ನು ಒದಗಿಸಬೇಕು, ನಿಲಯ್ಕಲ್-ಪಂಪಾ ಚೈನ್ ಬಸ್ ಸೇವೆ ನಡೆಸುತ್ತಿರುವ ಬಸ್‌ಗಳಲ್ಲಿ ಭಕ್ತರ ನ್ನು ತುಂಬಿ ತುರುಕಿಸಬಾ ರದೆಂದೂ ನ್ಯಾಯಾಲಯ ನಿರ್ದೇಶಿಸಿದೆ.