ಶಾಲೆಗೆ ನುಗ್ಗಿದ ಕಳ್ಳರು: ನಗದು ಕಳವು

ಕಾಸರಗೋಡು: ಪೊಯಿನಾಚಿಯಲ್ಲಿರುವ ಭಾರತ್ ಯು.ಪಿ ಶಾಲೆಗೆ ಕಳ್ಳರು ನುಗ್ಗಿ ಕಳವು ನಡೆಸಿದ್ದಾರೆ. ರೋಗಿಗಳಿಗೆ ಸಹಾಯ ಒದಗಿಸಲು ವಿದ್ಯಾರ್ಥಿಗಳು ಕಾರುಣ್ಯ ಪೆಟ್ಟಿಗೆಯಲ್ಲಿ ಸಂಗ್ರಹಿಸಿಟ್ಟಿದ್ದ 15,000 ರೂ.ಗಳನ್ನು ಕಳ್ಳರು ದೋಚಿದ್ದಾರೆ. ಶಾಲೆಯ ಕಚೇರಿ ಕೊಠಡಿಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕಪಾಟುಗಳನ್ನೆಲ್ಲಾ ಒಡೆದು ಅದರೊಳಗೆ ಮೂರು ಪೆಟ್ಟಿಗೆಗಳಲ್ಲಾಗಿ ಸಂಗ್ರಹಿಸಿಡಲಾಗಿದ್ದ ಕಾರುಣ್ಯ ಪೆಟ್ಟಿಗೆಯೊಳಗಿದ್ದ ಹಣ ದೋಚಿದ್ದಾರೆ. ಈ ಶಾಲೆಯ ಕಂಪ್ಯೂಟರ್ ತರಗತಿಯ ಬಾಗಿಲ ಬೀಗ ಒಡೆದು ಹಾಕಿದ್ದಾರೆ. ಮಾತ್ರವಲ್ಲ ಸ್ಟಾಫ್ ಕೊಠಡಿ ಮತ್ತಿತರ ಹಲವು ಕೊಠಡಿಗಳ  ಬೀಗವನ್ನು ಒಡೆದು ಅದರೊಳಗಿದ್ದ ಎಲ್ಲಾ ಸಾಮಗ್ರಿಗಳನ್ನೂ ಕಳ್ಳರು ಹೊರಕ್ಕೆ ಎಳೆದು ಹಾಕಿ ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಶಾಲೆಗೆ ಎರಡು ದಿನ ರಜೆಯಾಗಿತ್ತು. ಆ ಸಂದರ್ಭವನ್ನೇ ನೋಡಿ ಕಳ್ಳರು ಕಳವು ನಡೆಸಿದ್ದಾರೆ. ಈ ಬಗ್ಗೆ ನೀಡಲಾದ ದೂರಿನಂತೆ ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page