ಶಿರಿಯ ಅಂಗನವಾಡಿ ಮದ್ರಸ ಬಳಿ ಮುರಿದು ಬೀಳುತ್ತಿರುವ ರೆಂಬೆಗಳಿಂದ ಆತಂಕ; ತೆರವುಗೊಳಿಸಲು ನೀಡಿದ ಮನವಿಗೆ ಅಧಿಕಾರಿಗಳ ಮೌನ
ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಶಿರಿಯ ಬೀಚ್ ರಸ್ತೆ ಬದಿ ಇರುವ ಬೃಹತ್ ಮರಗಳು ಇಲ್ಲಿ ಕಾರ್ಯಾಚರಿ ಸುತ್ತಿರುವ ಅಂಗನವಾಡಿ ಹಾಗೂ ಮದ್ರಸಕ್ಕೆ ಅಪಾಯಕಾರಿಯಾಗಿ ಮಾರ್ಪಾಡುಗೊಂಡಿದೆ. ಹಲವು ಭಾರಿ ಅಧಿಕಾರಿಗಳಿಗೆ ದೂರು ನೀಡಿದರೂ ತೆರವುಗೊಳಿಸುವ ಗಡು ಮಾತ್ರವೇ ನೀಡುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಮರದ ರೆಂಬೆಗಳು ಅಪಾಯ ಆಹ್ವಾನಿಸುತ್ತಿದೆ. ಕಳೆದ ಶನಿವಾರ ಮುಂಜಾನೆ ಭಾರೀ ಗಾಳಿ, ಮಳೆಗೆ ರೆಂಬೆ ಕಟ್ಟಡದ ಮೇಲೆ ಬಿದ್ದು, ಬಾಗಿಲು, ನೀರಿನ ಟ್ಯಾಂಕ್, ಆವರಣ ಗೋಡೆ ಹಾನಿಗೊಂಡಿದೆ. ಇದು ಇಲ್ಲಿ ಕಾರ್ಯಾಚರಿಸುತ್ತಿರುವ ಅಂಗನ ವಾಡಿ ಹಾಗೂ ಮದ್ರಸಕ್ಕೆ ತಲುಪುವ ಮಕ್ಕಳಲ್ಲಿ ಭಯ ಉಂmÀÄಮÁಡಿದೆ. ಅಂಗನವಾಡಿ ಕಾಂಕ್ರೀಟ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಎದುರು ಭಾಗಕ್ಕೆ ಶೀಟನ್ನು ಹೊದಿಸಲಾಗಿದೆ. ಇದೆ ಪರಿಸರದಲ್ಲಿ ಮದ್ರಸ ಕೂಡಾ ಕಾರ್ಯಾಚರಿಸುತ್ತಿದೆ. ಮರದ ಒಣಗಿದ ರೆಂಬೆಗಳು ಪದೇ ಪದೇ ಕಟ್ಟಡದ ಮೇಲೆ ಬೀಳುತ್ತಿರುವುದು ಆತಂಕ ಉಂಟುಮಾಡಿದೆ. ಮಳೆಗೆ ಯಾವುದೇ ಕ್ಷಣದಲ್ಲಿ ಮರಗಳು ಮುರಿದು ಬೀಳುವ ಆತಂಕ ಸ್ಥಳೀಯರನ್ನು ಕಾಡಿದೆ. ಅಲ್ಲದೆ ಇದೇ ಪರಿಸರದಲ್ಲಿ ಟ್ರಾನ್ಸ್ ಫಾರ್ಮರ್ ಕೂಡಾ ಇರುವುದು ಅಪಾಯ ಕೈಬೀಸಿ ಕರೆಯುತ್ತಿದೆ. ಮರದ ರೆಂಬೆಗಳನ್ನು ತೆರವುಗೊಳಿಸಬೇಕೆಂದು ವರ್ಷಗಳ ಹಿಂದೆ ಊರವರು ಜಿಲ್ಲಾಧಿಕಾರಿ, ಮಂಗಲ್ಪಾಡಿ ಪಂಚಾಯತ್ ಸಹಿತ ವಿವಿಧ ಅಧಿಕಾರಿಗಳಿಗೆ ಮನವಿಯನ್ನು ನೀಡಿದ್ದು, ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲವೆAದು ಊರವರು ತಿಳಿಸಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳು ತಲುಪಿ ಮರವನ್ನು ತಪಾಸಣೆ ಹಾಗೂ ಅಳತೆ ಮಾಡಿ ಶೀಘ್ರ ತೆರವುಗೊಳಿ ಸುವುದಾಗಿ ತಿಳಿಸಿ ಹೋದವರು ಮರಳಿ ಬರಲಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಇನ್ನಾದರೂ ಈ ಬಗ್ಗೆ ಸೂಕ್ತ ಕ್ರಮ ಕೈಗ್ಠ್ಣ್ಢೊಬೇಕಾಗಿದೆ.