ಶಿರಿಯಾದಲ್ಲಿ ಕಾರುಗಳು ಢಿಕ್ಕಿ ಮಹಿಳೆ ಮೃತ್ಯು; ನಾಲ್ವರು ಚಿಕಿತ್ಸೆಯಲ್ಲಿ
ಕುಂಬಳೆ: ಮುಟ್ಟಂ ಶಿರಿಯದಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ವಾಹನ ಅಪಘಾತದಲ್ಲಿ ಗಾಯಗೊಂಡ ಮಹಿಳೆ ಮೃತಪಟ್ಟರು. ಕಾಞಂಗಾಡ್ ಕೊವ್ವಲ್ಪಳ್ಳಿ ಮುನ್ನೋಟ್ನ ಶ್ರೀ ವಿಷ್ಣುಮೂರ್ತಿ ಕ್ಷೇತ್ರ ಬಳಿ. ನಿವಾಸಿ ದಿ| ಅಬೂಬಕ್ಕರ್ ಎಂಬವರ ಪತ್ನಿ ನಫೀಸ (62) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.
ನಿನ್ನೆ ಮಧ್ಯಾಹ್ನ ಎರಡು ಕಾರುಗಳು ಪರಸ್ಪರ ಢಿಕ್ಕಿ ಹೊಡೆದು ಅಪಘಾತ ವುಂಟಾಗಿತ್ತು. ಇದರಿಂದ ಗಂಭೀರ ಗಾಯಗೊಂಡ ನಫೀಸರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದರೂ ಜೀವ ರಕ್ಷಿಸಲಾಗಲಿಲ್ಲ. ಅಪಘಾತದಲ್ಲಿ ಗಾಯಗೊಂಡ ಇತರ ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಮಂಗಳೂರಿನಲ್ಲಿ ಚಿಕಿತ್ಸೆಯಲ್ಲಿರುವ ಸೊಸೆಯ ತಂದೆಯನ್ನು ಸಂದರ್ಶಿಸಿ ಸಂಬಂಧಿಕರೊಂದಿಗೆ ಮರಳುತ್ತಿದ್ದಾಗ ಅಪಘಾತವುಂಟಾಗಿತ್ತು.