ಸಂಚರಿಸುತ್ತಿದ್ದ ಬಸ್ನಲ್ಲಿ ಬೆಂಕಿ: ಅದೃಷ್ಟವಶಾತ್ ತಪ್ಪಿದ ದುರಂತ
ಹೊಸದುರ್ಗ: ಕಾಞಂಗಾಡ್ ನಗರದಲ್ಲಿ ಸಂಚರಿಸುತ್ತಿದ್ದ ಬಸ್ನಲ್ಲಿ ಬೆಂಕಿ ಸೃಷ್ಟಿಯಾಗಿದೆ. ಅದೃಷ್ಟವಶಾತ್ ಭಾರೀ ದುರಂತ ತಪ್ಪಿಹೋಗಿದೆ. ಇಂದು ಬೆಳಿಗ್ಗೆ 9 ಗಂಟೆ ವೇಳೆಗೆ ಕಾಸರಗೋಡಿ ನಿಂದ ಪಯ್ಯನ್ನೂರಿಗೆ ತೆರಳುತ್ತಿದ್ದ ಖಾಸಗಿ ಬಸ್ನಲ್ಲಿ ಕೋಟಚ್ಚೇರಿ ಟ್ರಾಫಿಕ್ ಸರ್ಕಲ್ ಸಮೀಪ ಬೆಂಕಿ ಕಂಡು ಬಂದಿದೆ. ಮುಂಭಾಗದಿಂದ ಹೊಗೆ ಕಂಡು ಬಂದ ಹಿನ್ನೆಲೆಯಲ್ಲಿ ಚಾಲಕ ಬಸ್ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾನೆ. ಮುಂಭಾಗದ ಚಕ್ರದ ಸಮೀಪ ಬೆಂಕಿ ಸೃಷ್ಟಿಯಾಗಿದೆ. ಕೂಡಲೇ ಪ್ರಯಾಣಿ ಕರೆಲ್ಲರೂ ಹೊರಗಿಳಿದರು. ಮಾಹಿತಿ ತಿಳಿದು ತಲುಪಿದ ಹೋಂಗಾರ್ಡ್ ಗಳು, ತಲೆಹೊರೆ ಕಾರ್ಮಿಕರು ಸೇರಿ ಸಮೀಪದಿಂದ ನೀರು ತಂದು ಬೆಂಕಿ ನಂದಿಸಿದ್ದಾರೆ. ಶೀಘ್ರವೇ ಬೆಂಕಿ ನಂದಿಸಲು ಸಾಧ್ಯವಾಗಿರುವುದು ಭಾರೀ ದುರಂತವೊಂದನ್ನು ತಪ್ಪಿಸಿದೆ. ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವೆಂದು ಶಂಕಿಸಲಾಗಿದೆ.