ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿ ನಿಧನ
ಉಪ್ಪಳ: ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿಗೆ ಅಸೌಖ್ಯ ಕಾಣಿಸಿಕೊಂಡಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟರು. ಕರ್ನಾಟಕದ ಉಡುಪಿ ಕುಂಜಿಬೆಟ್ಟು ನಿವಾಸಿ ಸುರೇಶ್ (58) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಮಂಜೇಶ್ವರ ಉದ್ಯಾವರದಲ್ಲಿರುವ ಪತ್ನಿಯ ಸಹೋದರಿ ಮೀನ ಎಂಬವರ ಮನೆಗೆ ಮೊನ್ನೆ ಬಂದಿದ್ದರು. ನಿನ್ನೆ ಸಂಜೆ ಇವರಿಗೆ ವಾಂತಿ ಉಂಟಾಗಿತ್ತೆನ್ನಲಾ ಗಿದೆ. ಇದರಿಂದ ಕೂಡಲೇ ಮಂಗ ಳೂರಿನ ಆಸ್ಪತ್ರೆಗೆ ಕೊಂಡೊಯ್ಯು ತ್ತಿದ್ದಂತೆ ಸಾವು ಸಂಭವಿಸಿದೆ.
ಮೃತರು ಪತ್ನಿ ಮಾಲತಿ, ಪುತ್ರ ಋಷಿಕೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.