ಸಂಭ್ರಮ ಸಡಗರದೊಂದಿಗೆ ತ್ಯಾಗ ಬಲಿದಾನದ ಬಕ್ರೀದ್ ಹಬ್ಬ ಆಚರಣೆ

ಮಂಜೇಶ್ವರ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬÁಂದsವರು ನಿನ್ನೆ ಮಂಜೇಶ್ವರ ತಾಲೂಕಿನಾದ್ಯಂತ ಆಚರಿಸಿದರು.
ಬೆಳಿಗ್ಗೆಯಿಂದಲೇ ಹೊಸ ಬಟ್ಟೆ ತೊಟ್ಟು, ವಾಹನಗಳಲ್ಲಿ ನಗರದ ಈದ್ಗಾ ಮೈದಾನಕ್ಕೆ ತೆರಳಿದರು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಉದ್ಯಾವರ ಜುಮಾ ಮಸೀದಿಯಲ್ಲಿ ನಡೆದ ಈದ್ ನಮಾಜ್ ಗೆ ಮಸೀದಿ ಖತೀಬ್ ಅಬ್ದುಲ್ ಕರೀಂ ಧಾರಿಮಿ ನೇತೃತ್ವ ನೀಡಿದರು. ಕುಂಜತ್ತೂರು ಮಸ್ಜಿದ್ ನೂರ್ ಸಲಫಿ ಮಸೀದಿಯಲ್ಲಿ ಅಬ್ದುಲ್ ಖುದ್ದೂಸ್, ದಾರುಸ್ಸಲಾಂ ಸಲಫಿ ಜುಮಾ ಮಸೀದಿಯಲ್ಲಿ ಮೊಹಮ್ಮದಲಿ ಸಲಫಿ, ಕುಂಜತ್ತೂರು ಜುಮಾ ಮಸೀದಿಯಲ್ಲಿ ಹಾಶಿರ್ ಹಾಮಿದಿ, ಪೊಸೋಟು ಜುಮಾ ಮಸೀದಿಯಲ್ಲಿ ಶಬೀರ್ ಫೈಝಿ, ಉಪ್ಪಳ ಬದ್ರಿಯಾ ಜುಮಾ ಮಸೀದಿಯಲ್ಲಿ ಇಬ್ರಾಹಿಂ ಹನೀಫಿ ಮೊದಲಾದವರು ನೇತೃತ್ವ ನೀಡಿದರು.

You cannot copy contents of this page