ಸಹಾಯ ಪಡೆಯಲು ಹೋದ ವ್ಯಕ್ತಿ ನಾಪತ್ತೆ-ದೂರು
ಕಾಸರಗೋಡು: ರಮ್ಜಾನ್ ಪ್ರಯುಕ್ತ ಸಹಾಯ ಪಡೆಯಲು ಹೋದ ವ್ಯಕ್ತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಮೊಗ್ರಾಲ್ ಪುತ್ತೂರು ಮೊಗರ್‌ನ ಅಬ್ದುಲ್ ಸಮದ್ (40) ಎಂಬವರು ನಾಪತ್ತೆಯಾದ ವ್ಯಕ್ತಿಯಾಗಿ ದ್ದಾರೆ. ಇವರ ಪತ್ನಿ ಎಂ. ಮೈಮೂನ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮಾರ್ಚ್ ೧೮ರಂದು ಬೆಳಿಗ್ಗೆ ೬.೩೦ಕ್ಕೆ ಸಹಾಯ ಪಡೆಯಲೆಂದು ತಿಳಿಸಿ ಅಬ್ದುಲ್ ಸಮದ್ ಮನೆಯಿಂದ ತೆರಳಿದ್ದಾರೆ. ಅನಂತರ ಮನೆಗೆ ಮರಳಿ ಬಂದಿಲ್ಲವೆಂದು ಪತ್ನಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸಹಾಯ ಪಡೆಯಲು ಬಳ್ಳೂರಿಗೆ ತೆರಳಿರು ವುದಾಗಿಯೂ ತಿಳಿಸಲಾಗಿದೆ. ಅಬ್ದುಲ್ ಸಮದ್‌ರ ಪತ್ತೆಗಾಗಿ ತನಿಖೆ ಮುಂದುವರಿಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.