ಸಾರಾಯಿ ಸಹಿತ ಓರ್ವ ಸೆರೆ

ಬದಿಯಡ್ಕ: ಅಬಕಾರಿ ಇಲಾಖೆ ಆರಂಭಿಸಿರುವ ಸ್ಟ್ರೈಕಿಂಗ್ ಪೋರ್ಸ್ ಕಾರ್ಯಾಚರಣೆಯ ಅಂಗವಾಗಿ ಅಡೂರು ಗ್ರಾಮದ ಪಯರಡ್ಕ- ತಿಮ್ಮಯ್ಯಯಲ್ಲಿ ನಿನ್ನೆ ಬದಿಯಡ್ಕ ಅಬಕಾರಿ ರೇಂಜ್‌ನ ಪ್ರಿವೆಂಟೀವ್ ಆಫೀಸರ್ ರವೀಂ ದ್ರನ್ ಎಂ.ಕೆ.ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಐದು ಲೀಟರ್ ಅಕ್ರಮ ಸಾರಾಯಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಇದಕ್ಕೆ ಸಂಬಂಧಿಸಿ ತಿಮ್ಮಯ್ಯ ಮೂಲೆಯ ಚಂದ್ರನ್ ಟಿ. (೪೧) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿಇಒಗಳಾದ ಮನೋಜ್ ಪಿ, ಜೋನ್‌ಸನ್ ಪೋಲ್, ಮೋಹನ್ ಕುಮಾರ್ ಎಲ್. ಚಾಲಕ ರಾಝಾಕೃಷ್ಣನ್ ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page