ಸಿಪಿಎಂ ನೇತಾರರ ಮೇಲೆ ಸ್ಫೋಟಕ ಎಸೆತ: ಜಾಮೀನಿನಲ್ಲಿ ಬಿಡುಗಡೆಗೊಂಡ ಮೂವರು ಕಾಪಾದಂತೆ ಮತ್ತೆ ಜೈಲಿಗೆ
ಕಾಸರಗೋಡು: ಸಿಪಿಎಂ ನೇತಾರನ ಮೇಲೆ ಸ್ಫೋಟಕ ವಸ್ತು ಎಸೆದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಬಳಿಕ ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಂಡ ಯುವಕನ ಮೇಲೆ ಮೇಲ್ಪರಂಬ ಪೊಲೀಸರು ಕಾಪಾ ಹೇರಿ ಆತನನ್ನು ಮತ್ತೆ ಜೈಲಿಗಟ್ಟಲಾಗಿದೆ.
ಹಲವು ಕ್ರಿಮಿನಲ್ ಪ್ರಕರಣಗಳ ಆರೋ ಪಿಯಾಗಿರುವ ಹೊಸದುರ್ಗ ಅಂಬಲತ್ತರ ಕಣ್ಣೋತ್ತ್ ನಿವಾಸಿ ರತೀಶ್ ಅಲಿಯಾಸ್ ಮಾಂತಿ ರತೀಶ್ (42) ಎಂಬಾತನ ವಿರುದ್ಧ ಕಾಪಾ ಹೇರಿ ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.
ಅಂಬಲತ್ತರ ಸಿಪಿಎಂ ಮತ್ತು ಸಿಐಟಿಯುನ ಸಕ್ರಿಯ ಕಾರ್ಯಕರ್ತನಾಗಿದ್ದ ರತೀಶ್ ಇತ್ತೀಚೆಗೆ ಆ ಪಕ್ಷ ತೊರೆದಿದ್ದನು.
ಮೇ ೨೦ರಂದು ಇರಿಯಾ ಮುಚ್ಚಿಚ್ಚರದ ಬಳಿ ಸಿಪಿಎಂನ ಸ್ಥಳೀಯ ನೇತಾರನ ಮೇಲೆ ಸ್ಫೋಟಕ ಸಾಮಗ್ರಿ ಎಸೆದ ದೂರಿನಂತೆ ಪೊಲೀಸರು ರತೀಶ್ನ ವಿರುದ್ದ ಕೇಸು ದಾಖಲಿಸಿ ಬಂಧಿಸಿ ಬಳಿಕ ಆತನನ್ನು ನ್ಯಾಯಾಲಯದ ಬಂಧನದಲ್ಲಿರಿಸಲಾಗಿತ್ತು. ನ್ಯಾಯಾಲಯ ಬಂಧನದಿಂದ ಆತ ಮೊನ್ನೆಯಷ್ಟೇ ಜಾಮೀ ನಿನಲ್ಲಿ ಬಿಡುಗಡೆಗೊಂಡಿದ್ದನು. ಬಳಿಕ ಪೊಲೀಸರಿಗೆ ಆತನ ವಿರುದ್ಧ ಕಾಪಾ ಕಾನೂನು ಹೇರಿ ಆತನನ್ನು ಬಂಧಿಸಿ ಮತ್ತೆ ಜೈಲಿಗೆ ಕಳುಹಿಸಿಕೊಡಲಾಗಿದೆ.