ಸಿಪಿಐ ಮುಖಂಡ ನಿಧನ: ಪೆರ್ಮುದೆಯಲ್ಲಿ ಸರ್ವಪಕ್ಷ ಸಂತಾಪ ಸಭೆ 

ಉಪ್ಪಳ: ಇತ್ತೀಚೆಗೆ ನಿಧನರಾದ ಸಿಪಿಐ ಪಕ್ಷದ ಇಬ್ಬರು ನೇತಾರರಾದ ಬಿ.ವಿ. ರಾಜನ್ ಹಾಗೂ ಎಸ್. ಅಚ್ಯುತ ರಾವ್ ಸುಬ್ಬಯ್ಯಕಟ್ಟೆಯವರ ಸ್ಮರಣಾರ್ಥ ಪೆರ್ಮುದೆ ಬ್ರಾಂಚ್ ಹಾಗೂ ಸುಬ್ಬಯ್ಯಕಟ್ಟೆ ಬ್ರಾಂಚ್ ಆಶ್ರಯದಲ್ಲಿ ಪೆರ್ಮುದೆಯಲ್ಲಿ ಸರ್ವಪಕ್ಷ ಸಭೆ ನಡೆಯಿತು.

ವಿಜಯ ಕುಮಾರ್ ಪೆರ್ಮು ದೆಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಿಪಿಐ ಜಿಲ್ಲಾ ಸಮಿತಿ ಸದಸ್ಯ ರಾಮಕೃಷ್ಣ ಕಡಂಬಾರು, ಅಜಿತ್ ಎಂ.ಸಿ. ಲಾಲ್‌ಭಾಗ್, ಸಿಪಿಎಂ ಜಿಲ್ಲಾ ಕಾರ್ಯಕಾರಿ ಸದಸ್ಯ ಜಯಾನಂದ,  ಪೈವಳಿಕೆ ಪಂಚಾಯತ್ ಮಾಜಿ ಅಧ್ಯಕ್ಷ ಅಚ್ಯುತ ಚೇವಾರು, ಮುಸ್ಲಿಂ ಲೀಗ್‌ನ ಶಂಸುದ್ದೀನ್ ಕಂಬಾರು, ಪಂಚಾಯತ್ ಸದಸ್ಯರಾದ ಅಶೋಕ ಭಂಡಾರಿ, ಇರ್ಷಾಣ ಇಸ್ಮಾಯಿಲ್, ಕೇಶವ ಬಾಯಿಕಟ್ಟೆ, ಅಶ್ವತ್ಥ್ ಪೂಜಾರಿ ಲಾಲ್‌ಬಾಗ್, ಖಾದರ್, ಲತೀಫ್, ಬಿಜೆಪಿ ಕಾರ್ಯಕರ್ತ  ಗುರುವ  ಕುಂಡೇರಿ, ಕಾಂಗ್ರೆಸ್ ಕಾರ್ಯಕರ್ತ ಸಂತೋಷ್ ಮೊಂತೇರೋ, ಹಿರಿಯ ಅಧ್ಯಾಪಕ  ಶಂಕರ ಕಾಮತ್ ಚೇವಾರು, ಶಿವಪ್ರಸಾದ್ ಶೆಟ್ಟಿ ಕುಡಾಲು, ಎಸ್‌ವೈಎಸ್‌ನ ಖಾದರ್ ಪೆರಿಯಡ್ಕ, ಮೊಹಮ್ಮದ್ ಅಲಿ ಪೆರ್ಮುದೆ, ಸಿಪಿಐ ಪೈವಳಿಕೆ ಬ್ರಾಂಚ್ ಕಾರ್ಯದರ್ಶಿ ರವಿ ಮೊಂತೆರೋ ಭಾಗವಹಿಸಿದರು. ಪೆರ್ಮುದೆ ಬ್ರಾಂಚ್ ಕಾರ್ಯದರ್ಶಿ ಈಶ್ವರ ನಾಯ್ಕ ವಂದಿಸಿದರು.

RELATED NEWS

You cannot copy contents of this page