ಸೀತಾಂಗೋಳಿ ಪೇಟೆ ಸಮೀಪದಲ್ಲಿ ತ್ಯಾಜ್ಯ ರಾಶಿ ಸಮಸ್ಯೆಗೆ ಕಾರಣವಾಗುತ್ತಿರುವುದಾಗಿ ದೂರು

ಸೀತಾಂಗೋಳಿ: ಸೀತಾಂಗೋಳಿ ಪೇಟೆ ಸಮೀಪದ ಪ್ರದೇಶವೊಂದರಲ್ಲಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ಎಸೆಯಲಾಗಿದ್ದು, ಅದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಸೀತಾಂಗೋಳಿ ಪೇಟೆಯಿಂದ ಕೇವಲ 100 ಮೀಟರ್ ದೂರದಲ್ಲಿ  ಪುತ್ತಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ಪೆರ್ಲ ರಸ್ತೆ ಬದಿಯ ಪ್ರದೇಶದಲ್ಲಿ ತ್ಯಾಜ್ಯ ರಾಶಿ ತುಂಬಿಕೊಂಡಿದೆ. ಇಲ್ಲಿ ಪ್ರಾಕೃತಿಕ ನಿರ್ಮಿತ ಗುಹೆಯೊಂದಿದ್ದು, ಇದನ್ನು ವೀಕ್ಷಿಸಲು ಹಲವರು ತಲುಪುತ್ತಿದ್ದಾರೆ. ಹೀಗೆ ಬರುವವರಲ್ಲಿ ಕೆಲವು ಮದ್ಯಪಾನಿ ಗಳು ಮದ್ಯ ಸೇವಿಸಿದ ಬಳಿಕ ಬಾಟ್ಲಿ ಹಾಗೂ ಆಹಾರದ ತ್ಯಾಜ್ಯವನ್ನು ಇಲ್ಲೇ ಎಸೆದು ಹೋಗುತ್ತಿದ್ದಾರೆ. ಮಾತ್ರವಲ್ಲದೆ ವಿವಿಧೆಡೆಗಳಿಂದ ಪ್ಲಾಸ್ಟಿಕ್ ಸಹಿತ ವಿವಿಧ ತ್ಯಾಜ್ಯವನ್ನು ಇಲ್ಲಿಗೆ ತಂದು ಎಸೆದು ಹೋ ಗುವವರೂ ಇದ್ದಾರೆಂದು ದೂರಲಾಗಿದೆ.  ಪ್ರತಿದಿನ ಸಾವಿರಾರು ಮಂದಿ ತಲುಪುವ ಪೇಟೆಯ ಸಮೀಪದಲ್ಲೇ ಈ ರೀತಿಯ ತ್ಯಾಜ್ಯ ಎಸೆಯುತ್ತಿರುವುದು ಭವಿಷ್ಯದಲ್ಲಿ ಭಾರೀ ಸಮಸ್ಯೆಗೆ ಕಾರಣವಾಗಲಿದೆ. ಆದ್ದರಿಂದ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸೀತಾಂ ಗೋಳಿಯ  ಈಸಕುಂಞಿ ಎಂಬವರ ಜಿಲ್ಲಾ ಟೂರಿಸಂ ಪ್ರೋಮೋಶನ್ ಕೌನ್ಸಿಲ್‌ಗೆ  ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page