ಸೌದಿ ಅರೇಬಿಯಾದಲ್ಲಿ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಪೊಸೋಟು ನಿವಾಸಿ ಮಹಿಳೆ ಮೃತ್ಯು
ಮಂಜೇಶ್ವರ: ಸೌದಿ ಅರೇಬಿಯಾದಲ್ಲಿ ಎರಡು ತಿಂಗಳ ಹಿಂದೆ ನಡೆದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮಂಜೇಶ್ವರ ಸಮೀಪದ ಪೊಸೋಟು ನಿವಾಸಿ ಕುಂಞÂ ಅಹಮ್ಮದ್ ಎಂಬವರ ಪತ್ನಿ ಸಫಿಯಾ (58) ಭಾನುವಾರ ಮಧ್ಯಾಹ್ನ ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಸೌದಿ ಅರೆಬೀಯಾದಲ್ಲಿರುವ ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದರು. ಎರಡು ತಿಂಗಳ ಹಿಂದೆ ಕುಟುಂಬ ಸೌದಿ ಅರೇಬಿಯಾದಿಂದ ಕಾರಿನಲ್ಲಿ ರಿಯಾದ್ನ ಸಂಬAಧಿಕರ ಮನೆಗೆ ಸಂಚರಿಸುತ್ತಿರುವಾಗ ಸೌದಿ ಅರೇಬಿಯಾದಿಂದ ಸುಮಾರು 150 ಕಿಲೋ ಮೀಟರ್ ದೂರದಲ್ಲಿ ಕಾರು ಅಪಘಾತಕ್ಕೀಡಾಗಿದೆ. ಈ ವೇಳೆ ಸಫಿಯಾ ಗಂಭೀರ ಗಾಯಗೊಂಡಿದ್ದರು. ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಫಿಯಾ ಮೃತಪಟ್ಟಿದ್ದಾರೆ. ಮೃತರು ಪತಿ, ಮಕ್ಕಳಾದ ಸವಾದ್, ಸಾಹಿದ್, ಸೊಸೆಯಂದಿರಾದ ಸಂಶೀರ, ಮುಸ್ಹಾನ, ಸಹೋದರ ಸಹೋದರಿಯರಾದ ಅಬ್ದುಲ್ಲ, ಯೂಸಫ್, ಮೆಹಮೂದ್, ಅಬ್ದುಲ್ ಖÁದರ್, ಉಮ್ಮಾಲಿಮ್ಮ, ಜಮೀಲ, ಸುಬೈದ, ತಾಹಿರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.