ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ದೃಢೀಕರಣ ಪತ್ರಕ್ಕೆ 50 ರೂ. ಮುಖಬೆಲೆಯ ಛಾಪಾಕಾಗದ
ತಿರುವನಂತಪುರ: ಸ್ಥಳೀಯಾಡ ಳಿತ ಸಂಸ್ಥೆಗಳಿಂದ ಲಭಿಸುವ ವಿವಿಧ ಸೇವೆಗಳಿಗಿರುವ ಅಫಿದಾವಿತ್ ಅಥವಾ ದೃಢೀಕರಣ ಪತ್ರ ಸಲ್ಲಿಸಲು 50 ರೂ. ಮುಖಬೆಲೆಯ ಛಾಪಾ ಕಾಗದ (ಸ್ಟ್ಯಾಂಪ್ ಪೇಪರ್) ಮಾತ್ರ ವೇ ಸಾಕೆಂದು ರಾಜ್ಯ ಸ್ಥಳೀಯಾ ಡಳಿತ ಇಲಾಖೆ ಸ್ಪಷ್ಟಪಡಿಸಿದೆ.
1959ರ ಕೇರಳ ಛಾಪಾ ಕಾಗದ ನಿಯಂತ್ರಣ ಕಾನೂನುಪ್ರಕಾರ ಅಫಿದಾವಿತ್ ಸಲ್ಲಿಸಲು 50 ರೂ. ಮುಖಬೆಲೆಯ ಛಾಪಾಕಾಗದ ಬಳಸಿದರೆ ಸಾಕೆಂದು ತಿಳಿಸಲಾಗಿದೆ. ಅದನ್ನು ಬಿಟ್ಟು ಕೆಲವು ಸ್ಥಳೀಯಾಡಳಿತ ಸಂಸ್ಥೆಗಳು ಇದಕ್ಕೆ 50 ರೂ. ಮುಖಬೆಲೆಯ ಛಾಪಾ ಕಾಗದದಲ್ಲಿ 200 ರೂ. ಮುಖಬೆಲೆಯ ಛಾಪಾ ಕಾಗದವನ್ನು ಉಪಯೋಗಿಸು ವಂತೆ ಕಡ್ಡಾಯಗೊಳಿಸುತ್ತಿರುವ ಬಗ್ಗೆ ರಾಜ್ಯ ಸ್ಥಳೀಯಾಡಳಿತ ಸಚಿವಾಲ ಯಕ್ಕೆ ಹಲವು ದೂರುಗಳು ಲಭಿಸಿವೆ. ಅದ ನ್ನು ಪರಿಶೀಲಿಸಿ ಇಲಾಖೆ ಇಂತಹ ಅಗತ್ಯಗಳಿಗೆ 50 ರೂ. ಮುಖಬೆಲೆಯ ಛಾಪಾ ಕಾಗದವನ್ನು ಬಳಸಿದರೆ ಸಾಕೆಂದು ಸ್ಪಷ್ಟಪಡಿಸಿದೆ. ಮಾತ್ರವಲ್ಲ ನೋಟಿಫಿಕೇಶನ್‌ಗಾಗಿ 100 ರೂ. ಮುಖಬೆಲೆಯ ಛಾಪಾ ಕಾಗದ ಬಳಸಬೇಕೆಂದು ಇಲಾಖೆ ಹೇಳಿದೆ.