ಹಾನಿಗೊಂಡ ಸರ್ವೀಸ್ ರಸ್ತೆ : ವಾಹನ ಸಂಚಾರ ದುಸ್ತರ

ಮೊಗ್ರಾಲ್ ಪುತ್ತೂರು: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಗಳು ಹಾನಿಗೊಂಡು ಸಂಚಾರ ಸಮಸ್ಯೆ ಉಂಟಾಗಿದೆ ಎಂದು ದೂರಲಾಗಿದೆ. ತೀವ್ರಗೊಂಡ ಮಳೆಗೆ ನಾಶವಾದ ಸರ್ವೀಸ್ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ.

ಉಪ್ಪಳ-ಕಾಸರಗೋಡು ಸರ್ವೀಸ್ ರಸ್ತೆಗಳಲ್ಲಿ ಭಾರೀ ಹೊಂಡಗಳು ರೂಪುಗೊಂಡಿವೆ. ನಿರ್ಮಾಣ ಕಂಪೆನಿಗಳ ಕಣ್ಣಿಗೆ ಮಣ್ಣೆರಚುವ ತಂತ್ರಗಳು ಮಳೆ ನೀರಿನಲ್ಲಿ ಹಾನಿಯಾಗುವ ರಸ್ತೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೊಂಡಗಳಲ್ಲಿ ತುಂಬಿಸಿದ ಕಲ್ಲು, ಜಲ್ಲಿಹುಡಿಗಳೆಲ್ಲಾ ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ಚರಂಡಿಗಳು ಹೆಸರಿಗೆ ಮಾತ್ರವಾಗಿ ಸೀಮಿತವಾಗಿದೆ. ಚರಂಡಿಗಳಲ್ಲಿ ಮಳೆ  ನೀರು ಹರಿಯದ ಸ್ಥಿತಿ ಇದೆ.

ಕಳೆದ ಒಂದು  ವಾರದಿಂದ ಸುರಿಯುವ   ತೀವ್ರ ಮಳೆಗೆ ಸರ್ವೀಸ್ ರಸ್ತೆಗಳು  ಹೊಳೆಗಳಾಗಿ ಬದಲಾಗಿವೆ. ಈ ರಸ್ತೆಗಳಲ್ಲಿ ವಾಹನ ಸಂಚರಿಸುವಾಗ ಕಾಲ್ನಡೆ ಪ್ರಯಾಣಿಕರಿಗೆ ಕೆಸರು ನೀರಿನ ಅಭಿಷೇಕವೂ ಉಂಟಾಗುತ್ತಿದೆ. ಮೊಗ್ರಾಲ್ ಪುತ್ತೂರಿನಲ್ಲಿ ಸಂಚಾರ ಸಮಸ್ಯೆ ತೀವ್ರವಾಗಿದೆ.

You cannot copy contents of this page