ಹೆಚ್ಚಿಸಿದ ಬಸ್ ದರ ಹಿಂತೆಗೆಯಲು ಆಗ್ರಹಿಸಿ ಶಾಸಕರಿಂದ ಮನವಿ
ಮಂಜೇಶ್ವರ: ಕಾಸರ ಗೋಡು-ಮಂಗಳೂರು ರೂಟ್ನಲ್ಲಿ ಸಂಚರಿಸುವ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಹೆಚ್ಚಿಸಿದ ದರವನ್ನು ಹಿಂತೆಗೆಯಬೇಕೆಂದು ಶಾಸಕ ಎಕೆಎಂ ಅಶ್ರಫ್ ಸಾರಿಗೆ ಸಚಿವ ಗಣೇಶ್ ಕುಮಾರ್ರನ್ನು ಮುಖತಃ ಕಂಡು ಪತ್ರ ನೀಡಿದರು. ಕರ್ನಾಟಕದಲ್ಲಿ ಬಸ್ ದರ ಹೆಚ್ಚಿಸಿದ ಹಿನ್ನೆಲೆಯಲ್ಲಿ ಕೇರಳ ಆರ್ಟಿಸಿಯು ಟಿಕೆಟ್ ದರದಲ್ಲಿ ಹೆಚ್ಚಳ ಉಂಟುಮಾಡಿದ್ದು, ಇದನ್ನು ಹಿಂತೆಗೆಯಬೇಕೆಂದು ಶಾಸಕರು ಸಚಿವರಲ್ಲಿ ಆಗ್ರಹಿಸಿದ್ದಾರೆ.
ದಿನಂಪ್ರತಿ ಜಿಲ್ಲೆಯಿಂದ ಕಾಲೇಜು ವಿದ್ಯಾರ್ಥಿಗಳು, ರೋಗಿಗಳು, ಸಹಿತ ನೂರಾರು ಮಂದಿ ಮಂಗಳೂರಿಗೆ ಸಂಚರಿಸುತ್ತಿದ್ದು, ದರ ಹೆಚ್ಚಳ ಅವರಿಗೆ ಸಂಕಷ್ಟ ತಂದಿರುವುದಾಗಿ ಶಾಸಕರು ಪತ್ರದಲ್ಲಿ ವಿವರಿಸಿದ್ದಾರೆ.