ಬದಿಯಡ್ಕ: ಜಿಲ್ಲೆಯ ವಿವಿಧೆಡೆ ಗಳಲ್ಲಿ ಹೆಚ್ಚುತ್ತಿರುವ ದುಷ್ಕೃತ್ಯಗಳನ್ನು ತಡೆಯಲು ರಾಜ್ಯದ ಗೃಹ ಇಲಾಖೆ, ಪೊಲೀಸ್ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ವಿವಿಧ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ, ಚರ್ಚ್‌ಗಳಲ್ಲಿ ವ್ಯಾಪಕ ಕಳ್ಳತನ ನಡೆದಿದ್ದರೂ ಕಳ್ಳರನ್ನು ಪತ್ತೆಹಚ್ಚಲು ಪೊಲೀಸ್ ವಿಫಲವಾಗಿದೆ ಎಂದು ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ ಆರೋಪಿಸಿದ್ದಾರೆ. ಬೋವಿಕ್ಕಾನದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಕಾರನ್ನು ತಡೆದು ಹಲ್ಲೆಗೆತ್ನಿಸಿದ ಯತ್ನವನ್ನು ಅವರು ಈ ವೇಳೆ ಖಂಡಿಸಿದ್ದಾರೆ. ಕೃತ್ಯದ ಹಿಂದೆ ಮತಾಂದ ಶಕ್ತಿಗಳ ಕೈವಾಡವಿದೆ ಎಂದು ಗಂಭೀರ ಆರೋಪ ಹೊರಿಸಿದ್ದು, ಎಡರಂಗ ಸರಕಾರದ ಬೇಜವಾಬ್ದಾರಿ ತನಕ್ಕೆ ಇದು ಸಾಕ್ಷಿಯಾಗಿದೆ ಎಂದು ನುಡಿದ ಅವರು ಬಿಜೆಪಿ ಮಂಡಲ ಸಮಿತಿ ಇದರ ವಿರುದ್ಧ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.







