ಹೆಚ್ಚುತ್ತಿರುವ ಬಿಸಿ: ಮೃಗ ಸಂರಕ್ಷಣೆ ಇಲಾಖೆ ಸಜ್ಜು
ಕಾಸರಗೋಡು: ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಅದನ್ನು ಎದುರಿಸಲು ಜಿಲ್ಲೆಯಲ್ಲಿ ಮೃಗ ಸಂರಕ್ಷಣೆ ಇಲಾಖೆ ಸಜ್ಜಾಗಿದೆ. ಜಿಲ್ಲಾ ವೆಟರ್ನರಿ ಕೇಂದ್ರದಲ್ಲಿ ಕಂಟ್ರೋಲ್ ರೂಂ ಕಾರ್ಯಾರಂಭಗೊಂಡಿದೆ. ಜಿಲ್ಲೆಯಲ್ಲಿ ಪ್ರಸ್ತುತ ಹೆಚ್ಚಿನಂಶ ದನಗಳು ಕೂಡಾ ಮಿಶ್ರ ತಳಿ ಗೊಳಪಟ್ಟ ಜೆರ್ಸಿ, ಹೋಲ್ ಸ್ಟೀಂಫ್ರೀಶ್ಯನ್ ದನಗಳಾಗಿವೆ. ಅತ್ಯುತ್ಪಾದನಾ ಸಾಮರ್ಥ್ಯವಿರುವ ಈ ರೀತಿಯ ದನಗಳಿಗೆ ಊರಿನ ದನಗಳಿಗೆ ಹೋಲಿಸಿದರೆ ಗರಿಷ್ಠ ಬಿಸಿಯನ್ನು ಹಾಗೂ ಹವಾಮಾನದಲ್ಲಿ ರುವ ಪಂಪನ್ನು ತಾಳಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ. ಬೇಸಿಗೆ ಕಾಲದಲ್ಲಿ ಉಷ್ಣತೆ ಹೆಚ್ಚುವುಕ್ಕನುಸಾರ ವಾಗಿ ದನಗಳಲ್ಲಿ ವಿಭಿನ್ನ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಹೆಚ್ಚಿದ ಉಸಿರಾಟ, ಬಾಯಿ ತೆರೆದು ಉಸಿರಾಟ, ಜೊಲ್ಲು ಸುರಿಸುವುದು ಎಂಬಿವು ಇದರ ಲಕ್ಷಣಗಳಾಗಿವೆ. ಮತ್ತೆಯೂ ಬಿಸಿಯ ಕಾಠಿಣ್ಯ ಹೆಚ್ಚಿದಾಗ ದನಗಳ ದೇಹದ ಸಂಯೋಜನೆ ನಷ್ಟಗೊಂಡು ತೀವ್ರ ನೋವು ಹಾಗೂ ಸೂರ್ಯಾಘಾತ ಉಂಟಾಗಲು ಸಾಧ್ಯತೆ ಇದೆ. ಹಗಲು ೧೦ ಗಂಟೆಯಿಂದ ಸಂಜೆ ೪ರವರೆಗಿನ ಸಮಯದಲ್ಲಿ ದನಗಳನ್ನು ತೆರೆದ ಸ್ಥಳದಲ್ಲಿ ಮೇಯಲು ಹಾಗೂ ಕಟ್ಟಿ ಹಾಕಬಾರದು.
ಶೀಟ್ ಹಾಕಿದ ಹಟ್ಟಿ, ಎತ್ತರ ಕಡಿಮೆಯಾದ ಹಟ್ಟಿಗಳಲ್ಲಿ ದನಗಳನ್ನು ಕಟ್ಟಿ ಹಾಕಬಾರದು ಎಂದು ಮೃಗ ಸಂರಕ್ಷಣಾ ಇಲಾಖೆ ನಿರ್ದೇಶ ನೀಡಿದೆ.