ಹೊಸದುರ್ಗ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ಜಿಲ್ಲೆಯ ಅತ್ಯುತ್ತಮ ಪೊಲೀಸ್ ಅಧಿಕಾರಿ
ಕಾಸರಗೋಡು: ಜಿಲ್ಲೆಯ ಅತ್ಯುತ್ತಮ ಪೊಲೀಸ್ ಅಧಿಕಾರಿಯಾಗಿ ಹೊ ದುರ್ಗ ಪೊಲೀಸ್ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ರನ್ನು ಆಯ್ಕೆ ಮಾಡಲಾಗಿದೆ. ಜುಲೈ ತಿಂಗಳಲ್ಲಿ ನಡೆಸಿದ ಅವರ ಕಾರ್ಯಾಚರಣೆಯನ್ನು ಪರಿಗಣಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ಉತ್ತಮ ಅಧಿಕಾರಿಯಾಗಿ ಆರಿಸಿದ್ದಾರೆ. ಮಾದಕ ವಸ್ತುಗಳ ವಿರುದ್ಧ ಪೊಲೀಸರ ಕ್ರಮ, ಹಲವು ತಲೆಮರೆಸಿ ಕೊಂಡ ಆರೋಪಿಗಳ ಬಂಧನ, ಶಾಂತಿ ಸುವ್ಯವಸ್ಥೆ ಕಾಪಾಡುವಿಕೆ, ಕಳ್ಳರನ್ನು ಪತ್ತೆಹಚ್ಚಿ ಸೆರೆ ಹಿಡಿದಿರುವುದರ ಸಹಿತ ಅವರ ಕರ್ತವ್ಯವನ್ನು ಪರಿಗಣಿಸಿ ಉತ್ತಮ ಪೊಲೀಸ್ ಅಧಿಕಾರಿಯೆಂದು ಘೋಷಿಸ ಲಾಗಿದೆ. ಕೆಲವು ತಿಂಗಳ ಹಿಂದೆಯಷ್ಟೇ ಅಜಿತ್ ಕುಮಾರ್ ಕಾಸರಗೋಡು ಸ್ಟೇಟ್ ಸ್ಪೆಷಲ್ ಬ್ರಾಂಚ್ನಿಂದ ಹೊಸದುರ್ಗ ಪೊಲೀಸ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಗೊಂಡಿದ್ದರು.