ಹೋಟೆಲ್ ಕಾರ್ಮಿಕ ಕುಸಿದುಬಿದ್ದು ಮೃತ್ಯು

ಕುಂಬಳೆ: ಮೊಗ್ರಾಲ್ ಯುನಾನಿ ಆಸ್ಪತ್ರೆ ಬಳಿಯ ನಿವಾಸಿ ಮೊಯ್ದೀನ್ (53) ಎಂಬವರು ಕುಸಿದುಬಿದ್ದು ಮೃತ ಪಟ್ಟರು. ಇಂದು ಮುಂಜಾನೆ ಮನೆಯಲ್ಲಿ ನಮಾಜು ನಡೆಸಲು ಸಿದ್ಧತೆ ನಡೆಸುತ್ತಿ ದ್ದಾಗ ಕುಸಿದುಬಿದ್ದಿದ್ದಾರೆ. ಕೂಡಲೇ  ಕುಂಬಳೆ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈ ಹಿಂದೆ ಗಲ್ಫ್ ಉದ್ಯೋಗಿಯಾಗಿದ್ದ ಮೊಯ್ದೀನ್ ಬಳಿಕ ಊರಿಗೆ ಮರಳಿದ್ದು, ಪ್ರಸ್ತುತ ಕುಂಬಳೆಯಲ್ಲಿ ಹೋಟೆಲ್ ಕಾರ್ಮಿಕನಾಗಿದ್ದರು.

ದಿವಂಗತರಾದ ಅಂದುಂಞಿ-ನಫೀಸ ದಂಪತಿಯ ಪುತ್ರನಾದ ಮೃತರು  ಪತ್ನಿ ಸಫಿಯ, ಸಹೋದರಿ ಖದೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರ ಮೊಹಮ್ಮದ್, ಇತರ ಸಹೋದರಿಯರಾದ ಫಾತಿಮ, ಆಯಿಶ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page